ಪುಟ್ಟ ಕಂದಮ್ಮನ ಬಾಳಲ್ಲಿ ಇದೆಂಥ ವಿಧಿಯಾಟ! ಗೊಬ್ಬರದ ಗುಂಡಿಗೆ ಬಿದ್ದು ಮಗು ಮೃತ್ಯು

ಹೊಸದಿಗಂತ ಅಂಕೋಲಾ:

ಗೊಬ್ಬರದ ಗುಂಡಿಯಲ್ಲಿ ಬಿದ್ದು ಎರಡು ವರ್ಷದ ಬಾಲಕಿ ಮೃತ ಪಟ್ಟ ಘಟನೆ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳವಳ್ಳಿಯಲ್ಲಿ ನಡೆದಿದೆ.

ಸಾದ್ವಿ ಶ್ರೀಕಾಂತ ಹೆಬ್ಬಾರ್ ಮೃತ ಕಂದಮ್ಮಳಾಗಿದ್ದು ತಂದೆ ಶ್ರೀಕಾಂತ ಹೆಬ್ಬಾರ್ ದನದ ಕೊಟ್ಟಿಗೆ ಸ್ವಚ್ಛ ಮಾಡುತ್ತಿರುವ ಸಂದರ್ಭದಲ್ಲಿ ಅವರ ಜೊತೆ ತೆರಳಿದ್ದ ಬಾಲಕಿ ಪಕ್ಕದಲ್ಲಿ ಇರುವ ಗೊಬ್ಬರ ಗುಂಡಿಯಲ್ಲಿ ಬಿದ್ದಿರುವುದಾಗಿ ತಿಳಿದು ಬಂದಿದೆ.

ಗೊಬ್ಬರ ಗುಂಡಿಯಲ್ಲಿ ಮಳೆ ನೀರು ತುಂಬಿ ಕೊಂಡಿದ್ದು ಬಾಲಕಿ ಬಿದ್ದು ಕೆಲವು ಸಮಯದ ನಂತರ ತಂದೆಯ ಗಮನಕ್ಕೆ ಬಂದಿದ್ದು ಮಗುವನ್ನು ತಕ್ಷಣ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಲಾಯಿತಾದರೂ ಮಗು ಮೃತ ಪಟ್ಟಿರುವುದಾಗಿ ಪರೀಕ್ಷೆ ನಡೆಸಿದ ವೈದ್ಯರು ದೃಡಪಡಿಸಿದ್ದಾರೆ ಎನ್ನಲಾಗಿದೆ. ಮಗುವಿನ ಸಾವಿನಿಂದಾಗಿ ಹಳವಳ್ಳಿ ಸುತ್ತ ಮುತ್ತಲಿನ ಜನರು ಶೋಕ ಸಾಗರದಲ್ಲಿ ಮುಳುಗುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!