ಭಾರತೀಯ ಅರಣ್ಯ ಸೇವೆಗೆ ಯಲ್ಲಾಪುರದ ಸುಚೇತ್ ಬಾಳ್ಕಲ್ ಆಯ್ಕೆ

ಹೊಸದಿಗಂತ ವರದಿ, ಯಲ್ಲಾಪುರ :

ತಾಲೂಕಿನ ಸುಚೇತ್ ಬಾಳ್ಕಲ್ ಯುಪಿಎಸಸಿ ನಡೆಸುವ ಸಿವಿಲ್ ಸರ್ವಿಸ್ ನ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ದೇಶಕ್ಕೆ ೩೦ ನೇ ರ‍್ಯಾಂಕ್ ಗಳಿಸುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿರುತ್ತಾರೆ.

ಸಿವಿಲ್ ಸರ್ವಿಸ್ ನ ಪ್ರೀಲಿಮ್ಸ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಇವರು ಮೈನ್ಸ್ ಮತ್ತು ಸಂದರ್ಶನದಲ್ಲೂ ಜಯಗಳಿಸಿ ಈ ಸಾಧನೆಗೈದಿರುತ್ತಾರೆ.

ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಯಲ್ಲಾಫುರದ ಚೇತನಾ ಪ್ರಿಂಟರ್ಸ್ ನ ರಾಮಕೃಷ್ಣ ಮತ್ತು ಶ್ರೀಮತಿ ಬಾಳ್ಕಲ್ ಪುತ್ರರಾಗಿರುವ ಇವರು ಈ ಹಿಂದೆ ರಾಜ್ಯ ಮಟ್ಟದ ಕ್ವಿಜ್ ಮತ್ತು ಚರ್ಚೆಗಳಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದನ್ನು ಮತ್ತು ಎಸ ಎಸ ಎಲ್ ಸಿ ಪರೀಕ್ಷೆಯಲ್ಲಿ ಯಲ್ಲಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ಬೆಂಗಳೂರಿನ ಪಿವಿ ಇಂಜಿನಿಯರಿ0ಗ್ ಕಾಲೇಜುನಲ್ಲಿ ಪದವಿ ಪಡೆದಿರುವ ಇವರು ಪ್ರತಿಷ್ಠಿತ ಕಂಪೆನಿಗಳಲ್ಲಿ ದೊರೆತ ಕೆಲಸಗಳಿಗೆ ಸೀಮಿತಗೊಳ್ಳದೇ ನಾಗರಿಕ ಸೇವೆಗಳ ಪರೀಕ್ಷಾ ತಯಾರಿಯಲ್ಲಿ ಕಳೆದ ಮೂರು ವರ್ಷಗಳಿಂದ ತೊಡಗಿಕೊಂಡಿದ್ದರು . ಇವರ ಸಹೋದರಿ ಸಹನಾ ಬಾಳ್ಕಲ್ ಕೂಡ ಕರ್ನಾಟಕ ಆರ್ಥಿಕ ಇಲಾಖೆಯಲ್ಲಿ ಉಪ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದು ಒಂದೇ ಕುಟುಂಬದಿAದ ಇಬ್ಬರು ನಾಗರಿಕ ಸೇವೆಗೆ ಆಯ್ಕೆಯಾಗಿರುವುದು ವಿಶೇಷ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!