ಹೊಸದಿಗಂತ ವರದಿ ಮಂಗಳೂರು:
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ನಿನ್ನೆ (ಮೇ 7) ಆಪರೇಷನ್ ಸಿಂದೂರದ ಅಡಿಯಲ್ಲಿ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ಸಂಪೂರ್ಣ ಧ್ವಂಸ ಮಾಡಲಾಗಿತ್ತು.
ಇತ್ತ ಈ ಹೋರಾಟದಲ್ಲಿ ಭಾರತಕ್ಕೆ ವಿಜಯಲಕ್ಷ್ಮಿ ಒಲಿಯಲಿ ಎಂದು ಉಡುಪಿಯ ಕಡೆಗೋಲು ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿ ಪರ್ಯಾಯ ಶ್ರೀಪುತ್ತಿಗೆ ಶ್ರೀಗಳು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಉಡುಪಿಯಲ್ಲಿ ಶ್ರೀಕೃಷ್ಣನ ಒಂದು ಕೈಯಲ್ಲಿ ಚಕ್ರ ಮತ್ತೊಂದು ಕೈಯಲ್ಲಿ ಸಿಂಧೂರದ ಬಟ್ಟಲು ಹಿಡಿದು ನಿಂತಿದ್ದು ಯುದ್ಧಸನ್ನದ್ಧರಾದ ಸೈನಿಕರಿಗೆ, ಅವರ ಕುಟುಂಬಗಳಿಗೆ ಈ ಮೂಲಕ ಧೈರ್ಯ ತುಂಬಿದಂತೆ ಆಗಿದೆ. ಸುದರ್ಶನ ಚಕ್ರದ ಮೂಲಕ ದುಷ್ಟ ಸಂಹಾರ ಮಾಡಿದ್ದ ಕೃಷ್ಣ. ಸಿಂಧೂರದ ಬಟ್ಟಲು, ವೀರ ವನಿತೆಯರಿಗೆ ಶುಭಹಾರೈಕೆಯ ಸಂಕೇತವಾಗಿದೆ. ವಿಜಯಲಕ್ಷ್ಮಿ ಭಾರತಕ್ಕೆ ಒಲಿಯಲಿ ಎಂದು ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳಿಂದ ವಿಶೇಷ ಪ್ರಾರ್ಥನೆ, ವಿಶೇಷ ಪೂಜೆ ಸಲ್ಲಿಸಲಾಗಿದೆ.