ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಫೈನಲ್ ಪಂದ್ಯದಲ್ಲಿ ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್, ವೃದ್ಧಿಮಾನ್ ಸಾಹ ಹಾಫ್ ಸೆಂಚುರಿ ಯಿಂದ ಗುಜರಾತ್ ಟೈಟಾನ್ಸ್ 4 ವಿಕೆಟ್ ನಷ್ಟಕ್ಕೆ 214 ರನ್ ಸಿಡಿಸಿದೆ.
ಬ್ಯಾಟಿಂಗ್ ಇಳಿದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭ ಪಡೆಯಿತು.39 ರನ್ ಸಿಡಿಸಿದ್ದ ಶುಭಮನ್ ಗಿಲ್ ಸ್ಟಂಪ್ ಔಟ್ ಆದರು. ಧೋನಿ ಮಿಂಚಿನ ಸ್ಟಂಪಿಂಗ್ ಅಭಿಮಾನಿಗಳ ಮನತಣಿಸಿತು. ಗಿಲ್ ವಿಕೆಟ್ ಪತನ ಬಳಿಕ ಸಾಹ ಹಾಗೂ ಸಾಯಿ ಸುದರ್ಶನ್ ಹೋರಾಟ ಆರಂಭಗೊಂಡಿತು. ಸಾಹ ಹಾಫ್ ಸೆಂಚುರಿ ಸಿಡಿಸಿದರು. ಆದರೆ ಸಾಹ 39 ಎಸೆತದಲ್ಲಿ 54 ರನ್ ಸಿಡಿಸಿ ಔಟಾದರು. ಆದರೆ ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್ ಚೆನ್ನೈ ತಂಡದ ತಲೆನೋವು ಹೆಚ್ಚಿಸಿತು.
ಸಾಯಿ ಸುದರ್ಶನ್ ಹೋರಾಟಕ್ಕೆ ಬ್ರೇಕ್ ಹಾಕಲು ಚೆನ್ನೈ ಇನ್ನಿಲ್ಲದ ಪ್ರಯತ್ನ ಮಾಡಿತು. ಆದರೆ ಯಾವೂದೂ ಕೈಗೂಡಲಿಲ್ಲ. ಸುದರ್ಶನ್ ಬೌಂಡರಿ , ಸಿಕ್ಸರ್ ಆಟ ಚೆನ್ನೈ ಅಭಿಮಾನಿಗಳ ಆತಂಕ ಹೆಚ್ಚಿಸಿತು. ಸೆಂಚುರಿ ಸಮೀಪದಲ್ಲಿ ಸಾಯಿ ಸುದರ್ಶನ್ ಎಲ್‌ಬಿ ಬಲೆಗೆ ಬಿದ್ದರು. 47 ಎಸೆತದಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 96 ರನ್ ಸಿಡಿಸಿದರು.
ಹಾರ್ದಿಕ್ ಪಾಂಡ್ಯ 12 ಎಸೆತದಲ್ಲಿ ಅಜೇಯ 21 ರನ್ ಸಿಡಿಸಿದರು. ಈ ಮೂಲಕ ಗುಜರಾತ್ ಟೈಟಾನ್ಸ್ 4 ವಿಕೆಟ್ ನಷ್ಟಕ್ಕೆ 214 ರನ್ ಸಿಡಿಸಿತು.