ಸೇತುವೆ ದಿಢೀರ್ ಕುಸಿತ: ಭಾರೀ ಅನಾಹುತದಿಂದ ಮಾಜಿ ಡಿಸಿಎಂ ಪರಮೇಶ್ವರ್ ಸ್ವಲ್ಪದರಲ್ಲೇ ಪಾರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಉಂಟಾಗಿದ್ದ ನೆರೆ ಪ್ರವಾಹವನ್ನು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಇಂದು ನೋಡೋದಕ್ಕೆ ತೆರಳಿದ್ದರು.
ಈ ಸೇತುವೆಯ ಮೇಲೆ ಸಾಗಿದ ಕೇವಲ ಐದೇ ನಿಮಿಷದಲ್ಲಿ ಆ ಸೇತುವೆ ಕುಸಿದಿದ್ದರಿಂದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವಂತ ಘಟನೆ ಇಂದು ನಡೆದಿದೆ.
ನೆರೆ ಪರಿಸ್ಥಿತಿ ವೀಕ್ಷಿಸಿದ ಬಳಿಕ ತೀತಾ-ಗೊರವನಹಳ್ಳಿ ಸೇತುವೆ ಮೇಲೆ ನಿಂತು ಪ್ರವಾಹ ಪರಿಸ್ಥಿತಿಯನ್ನು, ಸೇತುವೆ ಹಾಳಾಗಿರೋ ಬಗ್ಗೆಯೂ ಪರಿಶೀಲನೆ ನಡೆಸಿ, ಅಲ್ಲಿಂದ ತೆರಳಿದ್ದರು.
ಮಾಜಿ ಡಿಸಿಎಂ ಜಿ ಪರಮೇಶ್ವರ್ ತೀತಾ-ಗೊರವನಹಳ್ಳಿ ಸೇತುವೆ ವೀಕ್ಷಣೆಯ ಬಳಿಕ, ತೆರಳಿದಂತ ಐದೇ ನಿಮಿಷದಲ್ಲಿ ಸೇತುವೆ ಭಾರೀ ಮಳೆಯಿಂದಾಗಿ ಕುಸಿತಗೊಂಡಿದೆ. ಜಿ.ಪರಮೇಶ್ವರ್ ಸೇತುವೆಯಿಂದ ಪಾಸ್ ಆಗಿದ್ದರಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಅವರು ಪಾರಾಗಿರುವ ಘಟನೆ ನಡೆದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!