ಹೊಸದಿಗಂತ ವರದಿ ಹಾವೇರಿ:
ಹೂವಿನ ಬೆಲೆ ದಿಡೀರ್ ಕುಸಿತಗೊಂಡು ಸೇವಂತಿಗೆ, ಚೆಂಡು ಹೂಗಳನ್ನು ರಸ್ತೆಗೆ ಹಾಕಿ ರೈತರ ಪ್ರತಿಭಟನೆ ನಡೆಸಿದರು.
ಹಾವೇರಿಯ ಜಿಲ್ಲಾಸ್ಪತ್ರೆಯ ಎದುರಿಗೆ ಇರೋ ಮಾರ್ಕೆಟ್ ಮುಂದೆ ಅನ್ನದಾತರ ಆಕ್ರೋಶ. ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಹೂವು ರಸ್ತೆಗೆ ಹಾಕಿ ವಾಹನ ತಡೆದು ಪ್ರತಿಭಟನೆ.
ರೈತರೇ ಖುದ್ದಾಗಿ ಹೂವಿನ ಮಾರಾಟ ಮಾಡಲು ಮುಂದಾದರೆ ವ್ಯಾಪಾರಸ್ಥರು ನಮಗೆ ಸ್ಥಳ ನೀಡ್ತಿಲ್ಲ ಎಂದು ರಸ್ತೆಯಲ್ಲಿ ಹೂ ಚಲ್ಲಿ ರೈತರು ಆಕ್ರೋಶ ಹೊರಹಾಕಿದರು.