ಬರ್ಗರ್, ಮ್ಯಾಗಿ, ಮೀಟ್, ಎಣ್ಣೆಯಲ್ಲಿ ಕರಿದ ಪದಾರ್ಥ ಇವುಗಳನ್ನೆಲ್ಲಾ ತಿನ್ನದೇ ಇರೋಕೆ ಸಾಧ್ಯವೇ ಇಲ್ಲ ಅಲ್ವಾ? ಆದರೆ ಈ ಎಲ್ಲ ಹೈ ಫ್ಯಾಟ್ ಫುಡ್ ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ನ್ನು ಹೆಚ್ಚು ಮಾಡುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬಾರದೆಂದರೆ ಇವುಗಳನ್ನು ಇಂದೇ ಬಿಟ್ಟುಬಿಡಿ… ಯಾವುದೀ ಫ್ಯಾಟ್ ಫುಡ್ಸ್?
ಮಾಂಸದಲ್ಲಿನ ಫ್ಯಾಟ್ ಅಂಶ, ಚಿಕನ್, ಮಟನ್, ಫಿಶ್, ಪಿಗ್ ಯಾವುದೇ ಮಾಂಸವಿರಲಿ ಇದರ ಫ್ಯಾಟ್ ಅಂಶ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
ಬದುಕಿನ ಅವಿಭಾಜ್ಯ ಅಂಗವಾದ ಬಿಸ್ಕೆಟ್, ಕೇಕ್ ಹಾಗೂ ಪೇಸ್ಟ್ರಿಗಳು ನೀವಂದುಕೊಂಡಷ್ಟು ಒಳ್ಳೆಯದಲ್ಲ. ಅವುಗಳನ್ನು ಕಡಿಮೆ ಮಾಡಿ.
ತುಪ್ಪ, ಬೆಣ್ಣೆ ಲಿಮಿಟ್‌ನಲ್ಲಿ ತಿಂದರೆ ಒಳ್ಳೆಯದು ಆದರೆ ಅದೇ ಅತಿಯಾದರೆ ಅದು ಆರೋಗ್ಯಕ್ಕೆ ಮಾರಕ.
ಚೀಸ್, ಗಟ್ಟಿಯಾದ ಚೆಡ್ಡಾರ್ ಚೀಸ್, ಚೀಸ್ ಸಂಬಂಧಿತ ಸ್ನ್ಯಾಕ್ಸ್‌ಗಳನ್ನು ಬಿಟ್ಟುಬಿಡಿ.
ಐಸ್‌ಕ್ರೀಂ, ಹೆವಿ ಕ್ರೀಮ್, ವಿಪ್ಪಡ್ ಕ್ರೀಂ ತಿನ್ನೋಕಷ್ಟೆ ಸಿಹಿ. ಆದರೆ ಅದು ಆರೋಗ್ಯಕ್ಕೆ ಕಹಿ ಅನ್ನೋದು ಮರೆಯಬೇಡಿ