ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಡಗು ಜಿಲ್ಲೆಯ ನಾಪೋಕ್ಲು ಹೋಬಳಿ ಉಪತಹಶೀಲ್ದಾರ್ ಸುನಿಲ್ ಕುಮಾರ್ (42) ವಿಧಿವಶರಾಗಿದ್ದಾರೆ.
ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಸವನ ಹಳ್ಳಿ ನಿವಾಸಿಯಾಗಿರುವ ಇವರು ಶನಿವಾರ ಕೂಡ ನಾಪೋಕ್ಲುವಿನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು.
ಕರ್ತವ್ಯ ಮುಗಿಸಿ ಅಂದು ಸಂಜೆ ಮನೆಗೆ ತೆರಳಿದ್ದ ಸುನಿಲ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಕುಮಾರ್ ನಿಧನ ಹೊಂದಿದ್ದಾರೆ. ಅವಿವಿವಾಹಿತರಾಗಿರುವ ಸುನಿಲ್ ಕುಮಾರ್ ಅವರ ಅಂತ್ಯಕ್ರಿಯೆ ಬಸವನ ಹಳ್ಳಿಯ ಅವರ ಸಹೋದರಿಯ ಮನೆಯಲ್ಲಿ ಸೋಮವಾರ ಜರುಗಲಿದೆ.
ಬೆಳ್ತಂಗಡಿ ತಾಲೂಕಿನ ಕಂದಾಯ ಇಲಾಖೆಯಲ್ಲಿ ಗ್ರಾಮಕರಣಿಕರಾಗಿ ಸೇವೆ ಸಲ್ಲಿಸಿದ್ದ ಸುನೀಲ್, ಉಪ ತಹಶೀಲ್ದಾರ್ ಅಗಿ ಪದೋನ್ನತಿ ಹೊಂದಿದ್ದರು.