Saturday, November 15, 2025

ಸಿಎನ್ ಜಿ ಸಾಗಾಟ ಟ್ಯಾಂಕರ್ ನಲ್ಲಿ ಹಠಾತ್ ಸೋರಿಕೆ: ಸುರತ್ಕಲ್ ನಲ್ಲಿ ಆತಂಕ, ಹೆದ್ದಾರಿ ವಾಹನ ಸಂಚಾರ ಬಂದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎನ್‌ಜಿ ಸಾಗಾಟ ಟ್ಯಾಂಕರ್‌ನಲ್ಲಿ ಏಕಾಏಕಿ ಸೋರಿಕೆ ಕಾಣಿಸಿಕೊಂಡು ಭಾರೀ ಆತಂಕ ಸೃಷ್ಟಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಜಂಕ್ಷನ್ ಬಳಿ ಕಳೆದ‌ ರಾತ್ರಿ ಸಂಭವಿಸಿದೆ.

ಸ್ಥಳೀಯರ ಮಾಹಿತಿ ಪ್ರಕಾರ ಈ ಟ್ಯಾಂಕರ್, ಬೈಕಂಪಾಡಿಯ ಗೇಲ್ ಪಂಪ್‌ನಿಂದ ಸಿಎನ್‌ಜಿ ತುಂಬಿಸಿಕೊಂಡು ಸುರತ್ಕಲ್ ಕಡೆಗೆ ಸಾಗುತ್ತಿತ್ತು. ಈ ನಡುವೆ ಟ್ಯಾಂಕರ್‌ನಲ್ಲಿ ಸೋರಿಕೆ ಕಾಣಿಸಿಕೊಂಡಿದ್ದು ತಕ್ಷಣ ಚಾಲಕ ಟ್ಯಾಂಕರನ್ನು ರಾಷ್ಟ್ರೀಯ ಹೆದ್ದಾರಿಯ ಬದಿಗೆ ನಿಲ್ಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅವರು ಅಗತ್ಯ ಮುಂಜಾಗ್ರತಾ ಕ್ರಮ‌ಕೈಗೊಂಡು ಸೋರಿಗೆ ತಡೆಗಟ್ಟಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಕರಲಕಾಲ ಸಂಚಾರಕ್ಕೆ ಬಂದ್ ಮಾಡಲಾಗಿತ್ತು.

error: Content is protected !!