Thursday, October 9, 2025

ಅಸ್ಸಾಂನಲ್ಲಿ ಹಠಾತ್ ಬಿರುಗಾಳಿ: ಹೋರ್ಡಿಂಗ್ ಕುಸಿದು ಆಟೋ ಚಾಲಕ ಕೂದಲೆಳೆ ಅಂತರದಲ್ಲಿ ಪಾರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂನ ಸಿಲ್ಚಾರ್‌ನಲ್ಲಿ ದುರ್ಗಾ ಪೂಜೆ ಸಂದರ್ಭದಲ್ಲಿ ಹಠಾತ್ ಬಿರುಗಾಳಿ ಬೀಸಿದ್ದರಿಂದ ಬೃಹತ್ ಹೋರ್ಡಿಂಗ್ ಆಟೋ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಆಟೋ ಚಾಲಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಚಂಡಮಾರುತವು ಕಚಾರ್ ಜಿಲ್ಲೆಯಾದ್ಯಂತ ಹಾನಿಯನ್ನುಂಟು ಮಾಡಿದೆ. ದುರ್ಗಾ ಪೂಜಾ ಪೆಂಡಲ್‌ಗಳು ಮತ್ತು ಇತರ ತಾತ್ಕಾಲಿಕ ರಚನೆಗಳೂ ಕುಸಿದಿವೆ. ಬೃಹತ್ ಹೋರ್ಡಿಂಗ್ ಆಟೋ ಮೇಲೆ ಬಿದ್ದಿರುವ ಭಯಾನಕ ಕ್ಷಣವನ್ನು ಸೆರೆಹಿಡಿದಿರುವ ಘಟನೆಯ ವಿಡಿಯೊ ವೈರಲ್ ಆಗಿದೆ.

ಹೋರ್ಡಿಂಗ್ ಆಟೋ ಮೇಲೆ ಬೀಳುತ್ತಿದ್ದಂತೆ ಚಾಲಕ ಹೊರಗೆ ಓಡಿದ್ದಾನೆ. ಗಾಬರಿಗೊಂಡ ಆತ ತನ್ನನ್ನು ತಾನು ಉಳಿಸಿಕೊಳ್ಳಲು ಓಡಿಹೋಗಿ ನೆಲಕ್ಕೆ ಬಿದಿದ್ದಾನೆ. ಈ ವೇಳೆ ಆಟೋ ನಜ್ಜುಗುಜ್ಜಾಗಿದೆ.

https://x.com/richapintoi/status/1973969115036725736?ref_src=twsrc%5Etfw%7Ctwcamp%5Etweetembed%7Ctwterm%5E1973969115036725736%7Ctwgr%5E5f895e0fc972fba298991a61412490606c583bc6%7Ctwcon%5Es1_&ref_url=https%3A%2F%2Fvishwavani.news%2F%2Fviral%2Fauto-drivers-narrow-escape-as-hoarding-collapses-on-vehicle-video-goes-viral-56807.html

ಹೋರ್ಡಿಂಗ್ ಕುಸಿದು ಎರಡು ಸಣ್ಣ ಕಾರುಗಳು, ಒಂದು ಸ್ಕೂಟರ್ ಮತ್ತು ಒಂದು ಮೋಟಾರ್ ಸೈಕಲ್ ಜಖಂಗೊಂಡಿದ್ದು, ಗಂಟೆಗಟ್ಟಲೆ ಸಂಚಾರಕ್ಕೆ ಅಡ್ಡಿಯುಂಟಾಯಿತು. ದುರ್ಗಾ ಪೂಜೆ ಹಬ್ಬದ ಸಂದರ್ಭದಲ್ಲಿ ಅಪಾರ ಭಕ್ತರು ಅಲ್ಲಿ ಸೇರಿದ್ದರು. ಹೀಗಾಗಿ ಘಟನೆಯು ಭಕ್ತರಲ್ಲಿ ಭೀತಿಯನ್ನುಂಟು ಮಾಡಿತು. ಅದೃಷ್ಟವಶಾತ್, ಯಾವುದೇ ಸಾವುವನೋವು ಸಂಭವಿಸಿಲ್ಲ.

error: Content is protected !!