ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲರೂ ನೆಮ್ಮದಿಯಾಗಿ ಫ್ಲೈಟ್ನಲ್ಲಿ ಕುಳಿತಿದ್ರು, ತಮ್ಮ ತಮ್ಮ ಕೆಲಸಗಳಿಗೆ ಹೋಗೋ ಬಗ್ಗೆ, ತಮ್ಮ ಊರಿಗೆ ಹೋಗೋ ಬಗ್ಗೆ, ಟ್ರಿಪ್ಗೆ ಹೋಗೋ ಬಗ್ಗೆ ಆಲೋಚನೆ ಮಾಡ್ತಾ ಎಕ್ಸೈಟ್ ಆಗಿದ್ರು. ಇನ್ನೇನು ಟೇಕ್ಆಫ್ ಆಗುವಾಗ ಸುಮ್ಮನೆ ಕುಳಿತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆಯೇ ಎದ್ದು ನಿಂತು ಸನ್ಗ್ಲಾಸ್ ತೆಗೆದು ನಾನು ಹೋಗ್ಬೇಕು ನನ್ನನ್ನು ಬಿಡಿ ಎಂದು ವಿಮಾನದ ಬಾಗಿಲು ತೆಗೆಯೋಕೆ ಹೋದ…
ಹೌದು, ಲಂಡನ್ನ ವ್ಯಕ್ತಿಯೊಬ್ಬ ಈ ರೀತಿ ಪ್ರಯತ್ನ ಮಾಡಿದ್ದು, ಆತನನ್ನು ಬಂಧಿಸಲಾಗಿದೆ. ಪ್ರಯಾಣಿಕರೊಬ್ಬರು ವಿಡಿಯೋ ಚಿತ್ರೀಕರಿಸಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಬಾಗಿಲು ತೆರೆಯಿರಿ ಎಂದು ಆತ ಕೂಗಾಡಿದ್ದಾನೆ, ನಂತರ ಸೀಟು ಬಿಟ್ಟು ಎದ್ದು ಬಂದಿದ್ದಾನೆ, ಪ್ರಯಾಣಿಕರು ಆತನನ್ನು ತಡೆಯಲು ಪ್ರಯತ್ನ ಮಾಡಿದ್ದಾರೆ ಆದರೂ ಸಾಧ್ಯವಾಗಿಲ್ಲ. ನಂತರ ಆತನನ್ನು ವಿಮಾನದಿಂದ ಕೆಳಗಿಳಿಸಿ ಹೋಗಲಾಯಿತು. ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ.
https://twitter.com/WinniePooh14466/status/1675863933381484546?s=20