ಸುದೀಪ್‌ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ: ಹೆಚ್‌.ಡಿ ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಬೊಮ್ಮಾಯಿ (BasavarajBommai) ಅವರ ಪರ ನಟ ಸುದೀಪ್ (Kichcha Sudeepa) ಅವರು ಪ್ರಚಾರ ಮಾಡೋದ್ರಿಂದ ನಮಗೇನು ತೊಂದರೆ ಇಲ್ಲ. ಸುದೀಪ್‌ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.

ಹಿಂದಿನಿಂದಲೂ ವಿಶ್ವಾಸದ ಮೇಲೆ ಹಲವು ನಟರು ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಹೋಗ್ತಾರೆ, ಅದು ಮಾಮೂಲಿಯಾಗಿ ನಡೆಯುತ್ತಿದೆ. ಬೊಮ್ಮಾಯಿ ಮೇಲಿನ ವಿಶ್ವಾಸದಲ್ಲಿ ಸುದೀಪ್ ಪ್ರಚಾರ ಮಾಡ್ತೀನಿ ಅಂತಾ ಹೇಳಿದ್ದಾರೆ. ಇದು ಅವರ ನಡುವೆ ಇರುವ ವೈಯಕ್ತಿಕ ಸಂಬಂಧಗಳು. ಅದಕ್ಕೆ‌ ಹೆಚ್ಚು ಮಹತ್ವದ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಬಿಜೆಪಿ ಅವರು ಅಭಿವೃದ್ಧಿ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಇದ್ಯಾವುದೂ ವರ್ಕ್ ಆಗಲ್ಲ. ನಟರನ್ನ ನೋಡೋಕೆ ಜನ ಬರ್ತಾರೆ. ಅಭಿಮಾನಿಗಳು ಜೈಕಾರ ಹಾಕ್ತಾರೆ, ‌ಶಿಳ್ಳೆ ಹೊಡೆಯುತ್ತಾರೆ. ನಟರು ಅನೇಕರ ಪರ ಪ್ರಚಾರಕ್ಕೆ ಹೋಗ್ತಾರೆ. ಕಾಂಗ್ರೆಸ್ ಪರವೂ ಹೋಗ್ತಾರೆ, ಬಿಜೆಪಿಗೂ ಹೋಗ್ತಾರೆ. ಬೇರೆ ಬೇರೆ ಕಡೆ ಹೋಗ್ತಾರೆ. ನಟರಲ್ಲಿ ಸ್ಥಿರತೆ ಇಲ್ಲ. ವೈಯಕ್ತಿಕ ಬಾಂಧವ್ಯ, ಸ್ನೇಹದ ಮೇಲೆ ಹೋಗ್ತಾರೆ. ಆದ್ರೆ ಜನ ಅಂತಿಮವಾಗಿ ತೀರ್ಮಾನ ಮಾಡ್ತಾರೆ ಅಂತಾ ಹೇಳಿದ್ದಾರೆ.

ಜೆಡಿಎಸ್‌ಗೆ ನನ್ನ ಕಾರ್ಯಕರ್ತರೇ ಸ್ಟಾರ್ ಕ್ಯಾಂಪೇನ್. ಪಂಚರತ್ನ ಯೋಜನೆಯೇ ಪಕ್ಷದ ಪ್ರಮುಖ ಆಕರ್ಷಣೆ. ಅ ಕಾರ್ಯಕ್ರಮ ಇಟ್ಟುಕೊಂಡು ಜನತೆ ಮುಂದೆ ಹೋಗ್ತೀನಿ. ಅಲ್ಲದೇ ಮುಖ್ಯಮಂತ್ರಿಗಳಾದ ಕೆ.ಚಂದ್ರಶೇಖರ ರಾವ್‌ ಮತ್ತು ಮಮತಾ ಬ್ಯಾನರ್ಜಿ ಅವರು ಕೆಲವು ಕಡೆ ಅವಶ್ಯಕತೆ ಇದ್ದರೆ ಪ್ರಚಾರಕ್ಕೆ ಬರ್ತೀನಿ ಅಂತಾ ಹೇಳಿದ್ದಾರೆ. ಮುಂದೆ ಅದನ್ನ ತೀರ್ಮಾನ ಮಾಡ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!