ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿಚ್ಚ ಸುದೀಪ್ ಇಂದು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸಿಸಿಎಲ್ ತಂಡದ ಜೊತೆ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ.
ಮೈಸೂರಿನಲ್ಲಿ ನಾಳೆ ಸಿಸಿಎಲ್ ಕ್ರಿಕೆಟ್ ಮ್ಯಾಚ್ ನಡೆಯಲಿದೆ. ಈ ಹಿನ್ನೆಲೆ ಸಿಸಿಎಲ್ ಟೀಮ್ ಜೊತೆ ಸುದೀಪ್ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಂದಹಾಗೆ, ಮ್ಯಾಕ್ಸ್ ಚಿತ್ರದ ಸಕ್ಸಸ್ ಮತ್ತು ಬಿಗ್ ಬಾಸ್ ಕನ್ನಡ 11ರ ಶೋ ಮುಕ್ತಾಯದ ಬಳಿಕ ಸುದೀಪ್ ಅವರು ಸಿಸಿಎಲ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದಾದ ಬಳಿಕ ಅನೂಪ್ ಭಂಡಾರಿ ಜೊತೆ ಅವರು ಸಿನಿಮಾ ಮಾಡಲಿದ್ದಾರೆ.