ಹೊಸದಿಗಂತ ವರದಿ ಬಳ್ಳಾರಿ:
ರಾಜ್ಯಸಭಾ ಸದಸ್ಯರಾಗಿ ಸಮಾಜ ಸೇವಕಿ, ಸುಧಾ ಮೂರ್ತಿ ಅವರು ನೇಮಕಗೊಂಡಿದ್ದು, ಬಳ್ಳಾರಿ ಬ್ರಾಹ್ಮಣ ಒಕ್ಕೂಟದ ಜಿಲ್ಲಾಧ್ಯಕ್ಷ ಆರ್.ಪ್ರಕಾಶ್ ರಾವ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಮಹಿಳಾ ದಿನಾಚರಣೆ ದಿನದಂದು ರಾಜ್ಯಸಭೆಗೆ ಕನ್ನಡತಿ, ಸರಳ, ಸೌಮ್ಯ ಸ್ವಭಾವದ ಶ್ರೀ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ದ್ರೌಪದಿ ಮೂರ್ಮು ಅವರು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ.
ಸುಧಾ ಮೂರ್ತಿ ಅವರು, ಸಮಾಜ ಸೇವೆ, ದಾನ, ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆ ಹಾಗೂ ಕೊಡುಗೆಯನ್ನು ನೀಡಿದ್ದು, ಇವರನ್ನು ಗುರುತಿಸಿ ನಾಮನಿರ್ದೇಶನ ಮಾಡಿದ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ತಿಳಿಸಿದ್ದಾರೆ.
Really worth full position to Smt Sudha Narayan Murthy for her long run selfless services stood as a a strong inspirational to many many people around the world.