ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ನಟನೆಯ ಸಿತಾರೆ ಝಮೀನ್ ಪರ್ ಸಿನಿಮಾವನ್ನು ಲೇಖಕಿ ಸುಧಾಮೂರ್ತಿ ನೋಡಿ ಶ್ಲಾಘಿಸಿದ್ದಾರೆ.
ವರ್ಷಗಳ ಹಿಂದೆ ಬಂದಿದ್ದ ತಾರೆ ಝಮೀನ್ ಪರ್ ಸಿನಿಮಾಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು, ಜನ ಸಿನಿಮಾ ಅದ್ಭುತ ಎಂದು ಹೇಳಿದ್ದರು. ಇದು ನಮ್ಮ ಕಣ್ಣು ತೆರೆಸುವಂತಹ ಸಿನಿಮಾ. ಏಕೆಂದರೆ, ನಾವು ಸಾಮಾನ್ಯರಲ್ಲ ಎಂದು ಕರೆಯುವ ಮಕ್ಕಳನ್ನು ಅನೇಕ ಜನರು ಅರ್ಥಮಾಡಿಕೊಳ್ಳುವುದಿಲ್ಲ. ಅವರ ಹೃದಯ ಶುದ್ಧವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರು ಜೀವನ ಯಾವಾಗಲೂ ಪರಿಶುದ್ಧ. ಹೀಗಾಗಿ, ಯಾವಾಗಲೂ ನಗುತ್ತಾರೆ. ಇದು ತುಂಬಾ ಸುಂದರವಾದ ಸಿನಿಮಾ ಎಂದು ಸುಧಾ ಮೂರ್ತಿ ಹೇಳಿದ್ದಾರೆ.