ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿ ಕಪಿಲ್ ಶರ್ಮಾ ಶೋ ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದ ಹಾಸ್ಯನಟನೊಬ್ಬ ಫೇಸ್‌ಬುಕ್ ಲೈವ್ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ತೀರ್ಥಾನಂದ್ ರಾವ್ ಆತ್ಮಹತ್ಯೆಗೆ ಯತ್ನಿಸಿದ ಹಾಸ್ಯನಟನಾಗಿದ್ದು, ತನಗೇನಾದರೂ ಆದರೆ ಅದಕ್ಕೆ ಕಾರಣ ತನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮಹಿಳೆಯೇ ಎಂದು ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ತನ್ನಿಂದ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದಾಳೆ.
ಈಗಾಗಲೇ ತಾನು 3-4 ಲಕ್ಷ ರೂಪಾಯಿ ಸಾಲದಲ್ಲಿ ಸಿಲುಕಿದ್ದೇನೆ. ಅವಳು ನನ್ನ ವಿರುದ್ಧ ಭಾಯಂದರ್‌ನಲ್ಲಿ ಪೊಲೀಸ್ ದೂರು ನೀಡಿದ್ದಾಳೆ. ಇದರ ಹಿಂದಿನ ಕಾರಣ ಮತ್ತು ಉದ್ದೇಶ ತನಗೆ ತಿಳಿದಿಲ್ಲ. ಆಕೆ ತನಗೆ ಕರೆ ಮಾಡಿ ಭೇಟಿಯಾಗಲು ಹೇಳುತ್ತಿದ್ದಳು ಎಂದು ಹೇಳಿ ವಿಷ ಕುಡಿದಿದ್ದಾರೆ.
ಕೂಡಲೇ ಆತನ ಸ್ನೇಹಿತರು ಹಾಗೂ ಸಹೋದ್ಯೋಗಿಗಳು ರಾವ್ ಮನೆಗೆ ಧಾವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಟನನ್ನು ಆಸತ್ರೆಗೆ ಸೇರಿಸಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಲದೇ ಒಂದೆರೆಡು ವೆಬ್ ಸೀರಿಸ್ ಮಾಡಿದರೂ ಸಂಭಾವನೆ ನೀಡಿಲ್ಲ ಎಂದು ಆರೋಪಿಸಿರುವ ರಾವ್, ಖಾಲಿ ಹೊಟ್ಟೆಯಲ್ಲಿ ಮಲಗುವ ದಿನಗಳು ಎದುರಾಗಿವೆ ಎಂದಿದ್ದಾರೆ.