ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿರುವ ಬನ್ನು ಕಂಟೋನ್ಮೆಂಟ್‌ನಲ್ಲಿರುವ ಸೇನಾ ನೆಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಒಟ್ಟು 8 ಪಾಕಿಸ್ತಾನದ ಯೊಧರು ಸಾವಿಗೀಡಾಗಿದ್ದಾರೆ.
ಆತ್ಮಾಹುತಿ ಬಾಂಬರ್‌ಗಳು ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಸೇನಾ ನೆಲೆಯಲ್ಲಿ ಸುತ್ತುವರಿದ ಗೋಡೆಗೆ ಡಿಕ್ಕಿ ಹೊಡೆದು ದಾಳಿ ನಡೆಸಿದರು. ಪರಿಣಾಮ 8 ಸೈನಿಕರು ಮೃತಪಟ್ಟಿದ್ದಾರೆ.
ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲಾ 10 ಆಕ್ರಮಣಕಾರರನ್ನು ಸೈನಿಕರು ಕೊಂದಿದ್ದಾರೆ ಎಂದು ಮಿಲಿಟರಿ ಹೇಳಿದೆ. ಬಂಡುಕೋರರ ದಾಳಿಗೆ ಮೃತಪಟ್ಟವರಲ್ಲಿ ಏಳು ಸೇನಾ ಸದಸ್ಯರು ಮತ್ತು ಒಬ್ಬ ಅರೆಸೇನಾ ಯೋಧ ಸೇರಿದ್ದಾರೆ.