TRAGEDY | ಪತ್ನಿಗೆ ಹೆದರಿಸಲು ಆತ್ಮಹತ್ಯೆಯ ನಾಟಕ, ನಿಜವಾಗಿಯೂ ಮೃತಪಟ್ಟ ಜಿಮ್‌ ಟ್ರೈನರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಹಾರ ಮೂಲದ ಜಿಮ್‌ ಟ್ರೈನರ್‌  ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

10 ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ಅಮಿತ್ ಕುಮಾರ್  ಒಂದು ವರ್ಷದ ಹಿಂದೆ ಜಿಮ್ ಸಮೀಪವೇ ವಾಸವಿದ್ದ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದರು. ಪೋಷಕರ ವಿರೋಧದ ನಡುವೆಯೂ ಅಮಿತ್ ಕುಮಾರ್ ವಿವಾಹ ನಡೆದಿತ್ತು.

ಪತ್ನಿ ನರ್ಸಿಂಗ್ ಕೋರ್ಸ್​ಗೆ ಸೇರಿದ ಬಳಿಕ ಪತಿಗೆ ಸಮಯ ನೀಡುತ್ತಿರಲಿಲ್ಲ. ಸ್ನೇಹಿತರ ಜೊತೆ ಸಮಯ ಕಳೆಯಲು ಇಷ್ಟಪಡುತ್ತಿದ್ದಳು. ಪದೇ ಪದೆ ಫೋನ್‌ನಲ್ಲಿಯೇ ಇರುತ್ತಿದ್ದಳು. ಈ ವಿಷಯಕ್ಕೆ ಪತಿ-ಪತ್ನಿ ನಡುವೆ ಗಲಾಟೆ ಆಗಿದೆ. ಜಗಳ ಜಾಸ್ತಿಯಾದಂತೆ ಪತಿ-ಪತ್ನಿ ಬೇರೆ ವಾಸವಿದ್ದರು. ಅಮಿತ್‌ ಆಕೆಗೆ ಪದೇ ಪದೆ ಕರೆ ಮಾಡಿ ಮನವೊಲಿಸುವ ಯತ್ನ ಮಾಡುತ್ತಿದ್ದ.

ಅಂತೆಯೇ ನಿನ್ನೆಯ ದಿನ ಬಾಗಲಗುಂಟೆಯಲ್ಲಿನ ನಿವಾಸದಲ್ಲಿದ್ದ ಅಮಿತ್​ ಆಕೆಗೆ ಮತ್ತೊಮ್ಮೆ ಫೋನ್ ಮಾಡಿದ್ದಾರೆ. ನೀನು ಬರದಿದ್ದರೆ ನೇಣು ಬಿಗಿದುಕೊಂಡು ಸಾಯುತ್ತೇನೆ ಎಂದು ಹೆದರಿಸಿದ್ದಾರೆ. ಖುರ್ಚಿ ಮೇಲೆ ನಿಂತು ನೇಣು ಬಿಗಿದುಕೊಂಡು ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದರು. ಈ ವೇಳೆ ಮೊಬೈಲ್ ಕೈಯಿಂದ ತಪ್ಪಿ ನೆಲಕ್ಕೆ ಬಿದ್ದಿದೆ. ಆಗ ಮೊಬೈಲ್ ಹಿಡಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಖುರ್ಚಿಯಿಂದ ಕಾಲು ಜಾರಿ ನೇಣು ಬಿಗಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!