ಈ ಬೇಸಿಗೆಗೆ ತಂಪಾಗಿ ಏನಾದ್ರು ಕುಡಿಬೇಕು ಅನ್ನಿಸಿದ್ರೆ ಸುಲಭವಾಗಿರೋ ಕೇಸರಿ ಲಸ್ಸಿ ಟ್ರೈ ಮಾಡಿ. ಒಳ್ಳೆಯ ರುಚಿ ಜೊತೆಗೆ, ಮಾಡಲು ಸುಲಭ.
ಬೇಕಾಗುವ ಸಾಮಗ್ರಿಗಳು:
ದಪ್ಪ ಹಾಲು – 1 ಕಪ್
ಮೊಸರು – 1/2 ಕಪ್
ಸಕ್ಕರೆ – 3 ಟೇಬಲ್ ಸ್ಪೂನ್
ಕೇಸರಿ – 5-6 ತಂತಿಗಳು
ಏಲಕ್ಕಿ ಪುಡಿ – 1/4 ಚಮಚ
ಬಾದಾಮಿ ಮತ್ತು ಪಿಸ್ತಾ – ಅಲಂಕರಿಸಲು
ಐಸ್ ಕ್ಯೂಬ್ – 4-5 (ಐಚ್ಛಿಕ)
ತಯಾರಿಸುವ ವಿಧಾನ:
ಒಂದು ಚಿಕ್ಕ ಕಪ್ ನಲ್ಲಿ ಸ್ವಲ್ಪ ಹಾಲನ್ನು ಬಿಸಿ ಮಾಡಿ ಅದರಲ್ಲಿ ಕೇಸರಿ ಎಸಳುಗಳನ್ನು ಹಾಕಿ 5 ನಿಮಿಷ ಹಾಗೆ ಬಿಡಿ.
ಈಗ ಬ್ಲೆಂಡರ್‌ಗೆ ಮೊಸರು, ಹಾಲು, ಸಕ್ಕರೆ, ಏಲಕ್ಕಿ ಪುಡಿ ಹಾಗೂ ನೆನೆಸಿದ ಕೇಸರಿ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಐಸ್ ಕ್ಯೂಬ್ ಸೇರಿಸಿ ಮತ್ತೊಮ್ಮೆ ಬ್ಲೆಂಡ್ ಮಾಡಿ. ಅದಕ್ಕೆ ಸಣ್ಣದಾಗಿ ಕಟ್ ಮಾಡಿಟ್ಟ ಬಾದಾಮಿ ಮತ್ತು ಪಿಸ್ತಾ ಹಾಕಿ ಅಲಂಕರಿಸಿದರೆ ಕೇಸರಿ ಲಸ್ಸಿ ತಯಾರಾಗುತ್ತೆ.