September 30, 2026
Wednesday, September 30, 2026
spot_img

Summer Drink | ಪುನರ್ಪುಳಿಯ ಜ್ಯೂಸ್ ಒಮ್ಮೆ ಕುಡಿದ್ರೆ, ಬೇರೆ ಜ್ಯೂಸ್ ಕಡೆ ತಿರುಗಿ ಕೂಡ ನೋಡಲ್ಲ

ಬೇಸಿಗೆಯ ಬಿಸಿಲಿನಲ್ಲಿ ದೇಹ ತಂಪಾಗಿಸಲು ನೈಸರ್ಗಿಕ ಪಾನೀಯಗಳು ತುಂಬಾ ಮುಖ್ಯ. ಅದರಲ್ಲೂ ಪುನರ್ಪುಳಿ (ಕೋಕಮ್) ಜ್ಯೂಸ್ ದೇಹಕ್ಕೆ ತಂಪು ನೀಡುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಒಮ್ಮೆ ಈ ಜ್ಯೂಸ್ ರುಚಿ ನೋಡಿದರೆ, ಬೇರೆ ಜ್ಯೂಸ್ ಕಡೆ ಗಮನವೇ ಹೋಗೋದಿಲ್ಲ ನೋಡಿ!

ಬೇಕಾಗುವ ಸಾಮಗ್ರಿಗಳು:

ಪುನರ್ಪುಳಿ (ಒಣ ಕೊಕ್ಕಮ್) – 10-12 ತುಂಡು
ನೀರು – 2 ಕಪ್
ಬೆಲ್ಲ ಅಥವಾ ಸಕ್ಕರೆ – 3-4 ಟೇಬಲ್ ಸ್ಪೂನ್
ಉಪ್ಪು – ಒಂದು ಚಿಟಿಕೆ
ಜೀರಿಗೆ ಪುಡಿ – 1/2 ಟೀ ಸ್ಪೂನ್
ಕರಿಮೆಣಸು ಪುಡಿ – 1/4 ಟೀ ಸ್ಪೂನ್
ಪುದೀನ ಎಲೆಗಳು – ಸ್ವಲ್ಪ

ತಯಾರಿಸುವ ವಿಧಾನ:

ಮೊದಲು ಪುನರ್ಪುಳಿಯನ್ನು 1 ಕಪ್ ನೀರಿನಲ್ಲಿ 20-30 ನಿಮಿಷ ನೆನೆಸಿಡಿ.

ನಂತರ ಅದನ್ನು ಚೆನ್ನಾಗಿ ಒತ್ತಿ ಅದರ ರಸ ತೆಗೆದುಕೊಳ್ಳಿ.

ಈ ರಸಕ್ಕೆ ಇನ್ನೊಂದು ಕಪ್ ನೀರು ಸೇರಿಸಿ. ಈಗ ಬೆಲ್ಲ ಅಥವಾ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ.

ಉಪ್ಪು, ಜೀರಿಗೆ ಪುಡಿ, ಕರಿಮೆಣಸು ಪುಡಿ ಸೇರಿಸಿ ಮಿಶ್ರಣ ಮಾಡಿ. ಕೊನೆಯಲ್ಲಿ ಪುದೀನ ಎಲೆಗಳನ್ನು ಹಾಕಿ ತಂಪಾಗಿಸಲು ಫ್ರಿಜ್‌ನಲ್ಲಿ ಇಡಿ ಅಥವಾ ಐಸ್ ಕ್ಯೂಬ್ ಸೇರಿಸಿ ಸರ್ವ್ ಮಾಡಿ.

Must Read