ಬಿಸಿಲಿನ ಕಾಲದಲ್ಲಿ ದೇಹಕ್ಕೆ ತಂಪು ನೀಡುವುದರ ಜೊತೆಗೆ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುವ ಪಾನೀಯಗಳಲ್ಲಿ ಜಲ್ ಜೀರಾ ಕೂಡ ಒಂದು. ಹುಳಿ, ಖಾರ, ರುಚಿಗಳ ಈ ಪಾನೀಯ ಊಟದ ನಂತರ ಕುಡಿಯಲು ಕೂಡ ಬೆಸ್ಟ್.
ಬೇಕಾಗುವ ಪದಾರ್ಥಗಳು:
ಜೀರಿಗೆ – 2 ಚಮಚ
ಪುದೀನ ಸೊಪ್ಪು – ಒಂದು ಹಿಡಿ
ಕೊತ್ತಂಬರಿ ಸೊಪ್ಪು – ಒಂದು ಹಿಡಿ
ಹಸಿಮೆಣಸಿನಕಾಯಿ – 1
ಶುಂಠಿ – ಸಣ್ಣ ತುಂಡು
ಹುಣಸೆ ರಸ ಅಥವಾ ನಿಂಬೆ ರಸ – 2 ಚಮಚ
ಕಪ್ಪು ಉಪ್ಪು – 1/2 ಚಮಚ
ಸಾಮಾನ್ಯ ಉಪ್ಪು – ರುಚಿಗೆ ತಕ್ಕಷ್ಟು
ಬೆಲ್ಲ ಅಥವಾ ಸಕ್ಕರೆ – 1 ಚಮಚ
ತಣ್ಣೀರು – 3 ಗ್ಲಾಸ್
ಮಾಡುವ ವಿಧಾನ:
ಮೊದಲು ಜೀರಿಗೆಯನ್ನು ಸ್ವಲ್ಪ ಫ್ರೈ ಮಾಡಿ ತಣ್ಣಗಾಗಲು ಬಿಡಿ. ಬಳಿಕ ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಪುದೀನ, ಕೊತ್ತಂಬರಿ, ಹಸಿಮೆಣಸಿನಕಾಯಿ, ಶುಂಠಿ ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ.
ಈ ಪೇಸ್ಟ್‌ಗೆ ಹುಣಸೆ ರಸ ಅಥವಾ ನಿಂಬೆ ರಸ, ಕಪ್ಪು ಉಪ್ಪು, ಸಾಮಾನ್ಯ ಉಪ್ಪು ಮತ್ತು ಬೆಲ್ಲ/ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ತಣ್ಣೀರು ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ
ಕೊನೆಯಲ್ಲಿ ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಬೇಕಿದ್ದರೆ ಐಸ್ ಕ್ಯೂಬ್ ಹಾಕಿ ಸರ್ವ್ ಮಾಡಿ.
ಈ ಜಲ್ ಜೀರಾ ದೇಹವನ್ನು ತಂಪಾಗಿಡುವುದರ ಜೊತೆಗೆ ಹಸಿವು ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.



