July 22, 2026
Wednesday, July 22, 2026
spot_img

ನಾಯಿ ಕಚ್ಚಿದಾಗ ಇಗ್ನೋರ್‌ ಮಾಡಿದ ಪೋಷಕರು,‌ ರೇಬೀಸ್‌ನಿಂದ ಡಾಗಿಯಂತೆಯೇ ವರ್ತಿಸುತ್ತಿರುವ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಯಿ ಕಚ್ಚಿದ್ದರೆ ದಯವಿಟ್ಟು ಯಾರೂ ನಿರ್ಲಕ್ಷ್ಯ ಮಾಡಬೇಡಿ. ನಾಲ್ಕು ತಿಂಗಳ ಹಿಂದೆ ನಾಯಿ ಕಚ್ಚಿದ್ದ ಬಾಲಕನೊಬ್ಬ ಸರಿಯಾಗಿ ಔಷಧ ತೆಗೆದುಕೊಳ್ಳದೇ ರೇಬೀಸ್‌ ಹೆಚ್ಚಾಗಿದೆ. ಇದರಿಂದ ಆತನೂ ನಾಯಿಯ ರೀತಿ ವರ್ತಿಸುತ್ತಿದ್ದಾನೆ.

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬಾಲಕ ಕರಣ್‌ಗೆ ನಾಲ್ಕು ತಿಂಗಳ ಹಿಂದಷ್ಟೇ ನಾಯಿ ಕಚ್ಚಿತ್ತು. ಬಡತನವಿದ್ದ ಕಾರಣ ಕುಟುಂಬ ಸಂಪೂರ್ಣ ಚಿಕಿತ್ಸೆ ಕೊಡಿಸಿರಲಿಲ್ಲ. ಎರಡು ಡೋಸ್‌ ಲಸಿಕೆ ಮಾತ್ರ ಪಡೆದಿದ್ದ. ಇತ್ತೀಚೆಗೆ ಬಾಲಕನಿಗೆ ರೇಬೀಸ್‌ ಲಕ್ಷಣಗಳು ಅತಿಯಾಗಿದೆ.

ಆದರೆ ಆರಾಮಾಗಿದ್ದ ಮಗ ಹೇಗೇಗೋ ಆಗುತ್ತಿದ್ದಾನೆ. ಆತನಿಗೆ ದೆವ್ವ ಮೆಟ್ಟಿದೆ ಎಂದು ಪೋಷಕರು ದೇವಸ್ಥಾನಗಳಿಗೆ ಅಲೆದಿದ್ದಾರೆ. ಆದರೆ ಬಾಲಕನ ಲಕ್ಷಣಗಳು ಇನ್ನೂ ಹೆಚ್ಚಾಗಿವೆ.

ಕಾಯಿಲೆ ಉಲ್ಬಣಗೊಂಡಿದ್ದು, ಈ ವೇಳೆ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ ರೇಬಿಸ್ ಇರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಬಾಲಕನನ್ನು ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಇದೀಗ ಬಾಲಕನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎನ್ನಲಾಗುತ್ತಿದೆ.

ರೇಬಿಸ್ ರೋಗ ಲಕ್ಷಣಗಳು ಒಮ್ಮೆ ಕಾಣಿಸಿಕೊಂಡರೆ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !