March 23, 2026
Monday, March 23, 2026
spot_img

summer drinks | ತೆಂಗಿನ ಹಾಲಿನ ಕಾಫಿ ಕುಡಿದಿದ್ದೀರಾ? ಇಲ್ಲಾಂದ್ರೆ ಈ ಥಾಯ್ ಸ್ಟೈಲ್ ಕೋಕೊನಟ್ ಕೋಲ್ಡ್ ಕಾಫಿ ಟ್ರೈ ಮಾಡಿ

ಬೇಸಿಗೆಯಲ್ಲಿ ತಂಪು ಪಾನೀಯ ಬೇಕೆನ್ನಿಸಿದಾಗ ಸಾಮಾನ್ಯ ಕಾಫಿ ಬದಲು ಸ್ವಲ್ಪ ವಿಭಿನ್ನವಾಗಿ ಟ್ರೈ ಮಾಡೋಣ ಅನಿಸಿದ್ರೆ, ಥಾಯ್ ಸ್ಟೈಲ್ ಕೋಕೊನಟ್ ಕೋಲ್ಡ್ ಕಾಫಿ ಒಳ್ಳೆಯ ಆಯ್ಕೆ. ತೆಂಗಿನ ಹಾಲಿನ ಸುವಾಸನೆ ಮತ್ತು ಕಾಫಿಯ ರುಚಿ ಸೇರಿ ಈ ಡ್ರಿಂಕ್ ತುಂಬಾ ರಿಫ್ರೆಶಿಂಗ್ ಆಗಿರುತ್ತದೆ.

ಬೇಕಾಗುವ ಪದಾರ್ಥಗಳು:

ಕಾಫಿ ಪೌಡರ್ – 1 ಟೇಬಲ್ ಸ್ಪೂನ್
ಬಿಸಿ ನೀರು – ½ ಕಪ್
ತೆಂಗಿನ ಹಾಲು– 1 ಕಪ್
ಸಕ್ಕರೆ ಅಥವಾ ಬೆಲ್ಲ – 2 ಟೇಬಲ್ ಸ್ಪೂನ್ (ರುಚಿಗೆ ತಕ್ಕಷ್ಟು)
ಐಸ್ ಕ್ಯೂಬ್ಸ್ – ಅಗತ್ಯವಷ್ಟು
ವನಿಲ್ಲಾ ಎಸೆನ್ಸ್ – 2-3 ಹನಿ

ಮಾಡುವ ವಿಧಾನ:

ಮೊದಲು ಕಾಫಿ ಪೌಡರ್ ಅನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ಕರಗಿಸಿ ಗಟ್ಟಿಯಾದ ಕಾಫಿ ಡಿಕಾಕ್ಷನ್ ತಯಾರಿಸಿಕೊಳ್ಳಿ. ನಂತರ ಇದನ್ನು ಸಂಪೂರ್ಣ ತಣ್ಣಗಾಗಲು ಬಿಡಿ.

ಮಿಕ್ಸರ್ ಜಾರಿನಲ್ಲಿ ತಣ್ಣಗಾದ ಕಾಫಿ, ತೆಂಗಿನ ಹಾಲು, ಸಕ್ಕರೆ ಅಥವಾ ಬೆಲ್ಲ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ. ಬೇಕಿದ್ದರೆ ವನಿಲ್ಲಾ ಎಸೆನ್ಸ್ ಸೇರಿಸಬಹುದು.

ಇದೀಗ ಗ್ಲಾಸ್‌ಗೆ ಐಸ್ ಕ್ಯೂಬ್ಸ್ ಹಾಕಿ, ಮೇಲಿನಿಂದ ತಯಾರಿಸಿದ ಕಾಫಿ ಮಿಶ್ರಣವನ್ನು ಸುರಿದು. ನಿಧಾನವಾಗಿ ಕಲಸಿ ತಂಪಾಗಿ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !