ಬೇಸಿಗೆಯ ಬಿಸಿಗೆ ತಂಪು ಕೊಡುವ ಪಾನೀಯಗಳ ಅವಶ್ಯಕತೆ ಹೆಚ್ಚಾಗುತ್ತದೆ. ನಮ್ಮ ಪುರಾತನ ಸಂಸ್ಕೃತಿಯಲ್ಲಿಯೇ ಅನೇಕ ಆರೋಗ್ಯಕರ ಮತ್ತು ಶಕ್ತಿದಾಯಕ ಪಾನೀಯಗಳು ಇವೆ. ಇವು ಬೇಸಿಗೆಯ ಹವಾಮಾನದಲ್ಲಿ ದೇಹವನ್ನು ತಂಪಾಗಿಸುವುದಲ್ಲದೆ, ಆರೋಗ್ಯಕ್ಕೂ ಹಿತಕರವಾಗಿವೆ.
ಮಜ್ಜಿಗೆ
ಮಜ್ಜಿಗೆ ಹಾಲಿನಿಂದ ಉತ್ಪನ್ನವಾಗಿದ್ದು, ಜೀರಿಗೆ, ಕೊತ್ತಂಬರಿ ಸೊಪ್ಪು, ಉಪ್ಪು ಇತ್ಯಾದಿಗಳನ್ನು ಸೇರಿಸಿ ಕುಡಿಯುವುದು ರೂಢಿ. ಇದು ದೇಹದ ತಾಪಮಾನವನ್ನು ತಗ್ಗಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಬೆಲ್ಲ-ಲಿಂಬೆ ಜ್ಯೂಸ್
ಬೆಲ್ಲ ಮತ್ತು ಲಿಂಬೆರಸದ ಜ್ಯೂಸ್ ಶರೀರಕ್ಕೆ ತಕ್ಷಣದ ಶಕ್ತಿ ನೀಡುತ್ತದೆ. ಇದರಲ್ಲಿ ಕಬ್ಬಿನ ಸಿಹಿತನ ಮತ್ತು ಲಿಂಬೆಯ ಸಿಟ್ರಿಕ್ ಆಸಿಡ್ ದೇಹವನ್ನು ಶುದ್ಧೀಕರಿಸುತ್ತವೆ.
ಪಾನಕ
ಹೆಸರು ಕೇಳಿದರೆ ತಕ್ಷಣ ದೇವಾಲಯದ ನೆಂಪು ಬರುತ್ತದೆ. ಇದು ಪ್ರಸಾದವಾಗಿಯೂ, ಬೇಸಿಗೆಗೆ ತಂಪು ಕೊಡುವ ಪಾನೀಯವಾಗಿಯೂ ಬಳಸಬಹುದು. ಇದು ತುಳಸಿ, ಬೆಲ್ಲ, ಲಿಂಬೆರಸ ಮತ್ತು ಕಾಳುಮೆಣಸಿನಿಂದ ತಯಾರಾಗುತ್ತದೆ. ಆರ್ಯುವೇದದ ಪ್ರಕಾರವೂ ಇದೊಂದು ಶಕ್ತಿವರ್ಧಕ ಪಾನೀಯ.
ಆಮ್ ಪನ್ನಾ:
ಹಸಿರು ಮಾವಿನಿಂದ ತಯಾರಾಗುವ ಈ ಪಾನೀಯವು ದೇಹದ ಉಷ್ಣತೆಯನ್ನು ಇಳಿಸಲು ಬಹುಪಯುಕ್ತ. ಇದರಲ್ಲಿ ಉಪ್ಪು, ಜೀರಿಗೆ ಸೇರಿಸಿ ತಯಾರಿಸಿದರೆ ದೇಹದ ಉರಿ ತಗ್ಗಿಸಲು ಸಹ ಸಹಾಯ ಮಾಡುತ್ತದೆ.
ಎಳನೀರು
ಇದು ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳ ಮೂಲ. ಜ್ವರ, ತಾಪಮಾನ ಹೆಚ್ಚಾದಾಗ ತೆಂಗಿನಕಾಯಿ ನೀರು ಶೀತಕಾರಿಯಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಶರೀರವನ್ನು ತಂಪಾಗಿಸುತ್ತದೆ.
ರಾಗಿ ಗಂಜಿ
ರಾಗಿ ಗಂಜಿ ಬೇಸಿಗೆಯಲ್ಲಿ ಉತ್ತಮ ಆಹಾರವಾಗಿದ್ದು, ಮಜ್ಜಿಗೆಯೊಂದಿಗೆ ಬೆರೆಸಿದರೆ ಬೇಸಿಗೆಗೆ ಉತ್ತಮ ಪಾನೀಯವಾಗಿದೆ.