March 22, 2026
Sunday, March 22, 2026
spot_img

Summer Drinks | ಆಲ್ಕೋಹಾಲ್ ಇಲ್ಲದೆಯೂ ರುಚಿಯಾದ ಸ್ಟ್ರಾಬೆರಿ ಮಾಕ್‌ಟೇಲ್ ಮಾಡ್ಬಹುದು

ಈ ಸೆಕೆಗೆ ತಂಪಾಗಿ, ರಿಫ್ರೆಶ್ ಆಗಿರೋ ಪಾನೀಯ ಬೇಕೆಂದರೆ ಸ್ಟ್ರಾಬೆರಿ ಮಾಕ್‌ಟೇಲ್ ಸೂಪರ್ ಆಯ್ಕೆ. ಸಿಹಿ-ಹುಳಿ ರುಚಿಯ ಜೊತೆಗೆ ನೋಡೋಕೆ ಕೂಡ ತುಂಬಾನೇ ಚಂದ. ಮನೆಯಲ್ಲೇ ಸುಲಭವಾಗಿ ಮಾಡಬಹುದು, ಪಾರ್ಟಿಗಳಿಗೆ ಕೂಡ ಪರ್ಫೆಕ್ಟ್ ಡ್ರಿಂಕ್.

ಬೇಕಾಗುವ ಸಾಮಗ್ರಿಗಳು:

ಸ್ಟ್ರಾಬೆರಿ ಹಣ್ಣು – 6 ರಿಂದ 8
ಸಕ್ಕರೆ ಅಥವಾ ಜೇನು – 2 ಚಮಚ
ನಿಂಬೆ ರಸ – 1 ಚಮಚ
ಸೋಡಾ – 1 ಕಪ್
ತಣ್ಣೀರು – 1/2 ಕಪ್
ಐಸ್ ಕ್ಯೂಬ್ಸ್ – ಬೇಕಾದಷ್ಟು
ಪುದೀನಾ ಎಲೆ – ಸ್ವಲ್ಪ (ಅಲಂಕಾರಕ್ಕೆ)

ಮಾಡುವ ವಿಧಾನ:

ಮೊದಲು ಸ್ಟ್ರಾಬೆರಿ ಹಣ್ಣುಗಳನ್ನು ಮಿಕ್ಸರ್‌ಗೆ ಹಾಕಿ, ಸಕ್ಕರೆ ಅಥವಾ ಜೇನು ಸೇರಿಸಿ ಸ್ಮೂತ್ ಪ್ಯೂರಿ ಮಾಡಿ.
ಈಗ ಗ್ಲಾಸ್‌ಗೆ ಈ ಸ್ಟ್ರಾಬೆರಿ ಪ್ಯೂರಿ ಹಾಕಿ, ನಿಂಬೆ ರಸ ಸೇರಿಸಿ ಚೆನ್ನಾಗಿ ಕಲಸಿ.

ನಂತರ ಐಸ್ ಕ್ಯೂಬ್ಸ್ ಹಾಕಿ, ತಣ್ಣೀರು ಹಾಗೂ ಸೋಡಾ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ಮೇಲಿಂದ ಪುದೀನಾ ಎಲೆ ಹಾಕಿ ಅಲಂಕರಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !