August 13, 2026
Thursday, August 13, 2026
spot_img

Summer Tips | ಬೇಸಿಗೆಯ ಬಿಸಿಲಿಗೆ ಬ್ರೇಕ್ ಹಾಕಲು ನಿಮ್ಮ ಬ್ಯಾಗ್‌ನಲ್ಲಿರಲಿ ಈ 5 ವಸ್ತುಗಳು

ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅತಿಯಾದ ಬಿಸಿಲಿನಿಂದಾಗಿ ನಿರ್ಜಲೀಕರಣ ಮತ್ತು ಸನ್ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚು. ನೀವು ಕೆಲಸಕ್ಕಾಗಲಿ ಅಥವಾ ವೈಯಕ್ತಿಕ ಕಾರ್ಯಗಳಿಗಾಗಲಿ ಮನೆಯಿಂದ ಹೊರಗೆ ಹೆಜ್ಜೆ ಇಡುವಾಗ ಈ ಕೆಳಗಿನ ವಸ್ತುಗಳು ನಿಮ್ಮ ಜೊತೆಗಿರಲಿ:

ದೇಹದ ಉಷ್ಣಾಂಶ ಸಮತೋಲನದಲ್ಲಿಡಲು ಆಗಾಗ ನೀರು ಕುಡಿಯುವುದು ಅನಿವಾರ್ಯ. ಸಾಧ್ಯವಾದರೆ ಎಳನೀರು ಅಥವಾ ನಿಂಬೆ ಹಣ್ಣಿನ ಶರಬತ್ತು ಜೊತೆಗಿರಲಿ.

ನೇರ ಸೂರ್ಯನ ಕಿರಣಗಳು ತಲೆಗೆ ತಗುಲದಂತೆ ರಕ್ಷಣೆ ಪಡೆಯಲು ಅಗಲವಾದ ಟೋಪಿ ಅಥವಾ ಛತ್ರಿ ಬಳಸಿ.

ಕಣ್ಣುಗಳ ರಕ್ಷಣೆಗಾಗಿ ಉತ್ತಮ ಗುಣಮಟ್ಟದ ಸನ್ ಗ್ಲಾಸ್ ಧರಿಸುವುದನ್ನು ಮರೆಯಬೇಡಿ.

ತ್ವಚೆಯ ಮೇಲೆ ಕಪ್ಪು ಕಲೆಗಳು ಅಥವಾ ಸನ್ ಬರ್ನ್ ಆಗುವುದನ್ನು ತಡೆಯಲು ಹೊರಡುವ 20 ನಿಮಿಷ ಮುಂಚೆ ಸನ್ ಸ್ಕ್ರೀನ್ ಹಚ್ಚಿಕೊಳ್ಳಿ.

ಬಿಸಿಲಿಗೆ ಗಾಢ ಬಣ್ಣದ ಬಟ್ಟೆಗಳಿಗಿಂತ ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !