ಐಎಎಸ್‌ ಅಧಿಕಾರಿ ಎಂದು ಹೇಳಿಕೊಂಡು 20 ಹುಡುಗಿಯರಿಗೆ ವಂಚಿಸಿದ ಸುಂದರಾಂಗ ಜಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮ್ಯಾಟ್ರಿಮೊನಿಯಲ್ಲಿ ಫೇಕ್‌ ಯಾರು ರಿಯಲ್‌ ಯಾರು ಅನ್ನೋದನ್ನು ಕಂಡುಹಿಡಿಯೋದು ಅತೀ ಕಷ್ಟದ ಕೆಲಸವಾಗಿದೆ. ಇಲ್ಲೊಬ್ಬ ಸುಂದರಾಂಗ ಜಾಣ ತಾನು ಐಎಎಸ್‌ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಇಪ್ಪತ್ತಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಮೋಸ ಮಾಡಿದ್ದಾನೆ.

ಮ್ಯಾಟ್ರಿಮೋನಿ ವೈಬ್‌ಸೈಟ್‌ನಲ್ಲಿ ಜೀವನ್ ಕುಮಾರ್ ಎಂಬ ವ್ಯಕ್ತಿ ಐಡಿ ಕ್ರಿಯೆಟ್ ಮಾಡಿ ಐಎಎಸ್ ಆಫೀಸರ್ ಎಂದು ಮಹಿಳೆಗೆ ವಂಚಿಸುತ್ತಿದ್ದ. ಐಎಎಸ್, ಐಪಿಎಸ್ ಆಗಿರುವುದಾಗಿ ಹೇಳುತ್ತಿದ್ದ. ಬಳಿಕ ಮದುವೆ ಆಗುವುದಾಗಿ ನಂಬಿಸಿ ಕ್ಲೋಸ್ ಆಗಿ ಮೆಸೇಜ್ ಮಾಡಿ, ಖಾಸಗಿ ಫೋಟೊ ಹಾಗೂ ವಿಡಿಯೋ ಪಡೆಯುತ್ತಿದ್ದ.

ಅದಾದ ಸ್ವಲ್ಪ ದಿನಗಳ ನಂತರ ತಾಯಿಗೆ ಕ್ಯಾನ್ಸರ್ ಇದೆ. ಚಿಕಿತ್ಸೆಗೆ ಹಣ ಬೇಕು ಹಾಗೂ ಟ್ರಬಲ್ ಇದೆ ಎಂದು ಹೇಳಿ ಹಣ ಪಡೆಯುತ್ತಿದ್ದ. ಮೊದಲು 3 ಲಕ್ಷ ಹಣ ಪಡೆದು, ಮತ್ತೆ 5 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ. ಹಣ ಕೊಡದೇ ಹೋದರೆ ಖಾಸಗಿ ಫೋಟೊ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ.

ಒಂದು ವೇಳೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ದೇಶ್ಯಾದ್ಯಂತ 20ಕ್ಕೂ ಅಧಿಕ ಮಹಿಳೆಯರಿಗೆ ಇದೇ ರೀತಿ ಮೋಸ ಮಾಡಿರುವುದಾಗಿ ತಿಳಿದುಬಂದಿದ್ದು, ಸದ್ಯ ಹೆಬ್ಬಾಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!