Sunday, November 16, 2025

Sunday Special: ಆಂಧ್ರ ಸ್ಟೈಲ್ ಸ್ಪೈಸಿ ಚಿಕನ್ ಕರಿ; ನೀವೂ ಟ್ರೈ ಮಾಡಿ

ವಾರಾಂತ್ಯ ಬಂತು ಅಂದರೆ ಮನೆಯಲ್ಲಿ ಒಂದು ವಿಶೇಷವಾದ ರುಚಿ ಇರಲೇ ಬೇಕು. ವಿಶೇಷವಾಗಿ ಆಂಧ್ರ ಸ್ಟೈಲ್ ಸ್ಪೈಸಿ ಚಿಕನ್ ಕರಿ. ರುಚಿಯಂತೂ ತುಂಬಾ ಚೆನ್ನಾಗಿರುತ್ತೆ. ಸ್ವಲ್ಪ ಸಮಯ ತೆಗೆದುಕೊಂಡರೂ, ಸಿದ್ಧವಾದ ನಂತರ ಬಿಸಿ ಅನ್ನದ ಜೊತೆ ಈ ಕರಿ ತಿಂದ್ರೆ ಅದರ ರುಚಿನೇ ಬೇರೆ.

ಬೇಕಾಗುವ ಪದಾರ್ಥಗಳು

ಚಿಕನ್ – 1 ಕೆಜಿ
ಈರುಳ್ಳಿ – 3 (ಸಣ್ಣ ಕತ್ತರಿಸಿ)
ಟೊಮ್ಯಾಟೊ – 2
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 2 ಟೇಬಲ್ ಸ್ಪೂನ್
ಎಣ್ಣೆ – 4 ಟೇಬಲ್ ಸ್ಪೂನ್
ಕರಿಬೇವು – ಸ್ವಲ್ಪ
ಕೊತ್ತಂಬರಿ – ಸ್ವಲ್ಪ
ಕೆಂಪು ಮೆಣಸಿನಹುಡಿ – 2½ ಟೀ ಸ್ಪೂನ್
ಹಳದಿ – ½ ಟೀ ಸ್ಪೂನ್
ಧನಿಯಾ – 2 ಟೀ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಕಾಳುಮೆಣಸು – ½ ಟೀ ಸ್ಪೂನ್
ಗರಂ ಮಸಾಲೆ – 1 ಟೀ ಸ್ಪೂನ್

ತಯಾರಿಸುವ ವಿಧಾನ:

ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕರಿಬೇವು, ಈರುಳ್ಳಿ ಸೇರಿಸಿ ಹುರಿಯಿರಿ. ಈರುಳ್ಳಿ ಬಂಗಾರದ ಬಣ್ಣಕ್ಕೆ ಬರುವವರೆಗೆ ಹುರಿಯಿರಿ.

ಈಗ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿದು, ನಂತರ ಟೊಮ್ಯಾಟೊ ಹಾಕಿ ಮೃದುವಾಗುವವರೆಗೆ ಬೇಯಿಸಬೇಕು. ಟೊಮ್ಯಾಟೊ ಎಣ್ಣೆ ಬಿಡಲಾರಂಭಿಸಿದಾಗ ಮಸಾಲೆ ಎಲ್ಲ ಮಸಾಲೆಗಳನ್ನು ಹಾಕಿ 2–3 ನಿಮಿಷ ಹುರಿಯಿರಿ.

ಈ ಹಂತದಲ್ಲಿ ಚಿಕನ್ ತುಂಡುಗಳನ್ನು ಸೇರಿಸಿ ಮಸಾಲೆಯು ಸಂಪೂರ್ಣ ಹತ್ತುವಂತೆ ಕಲಸಿ ಮುಚ್ಚಿ 10 ನಿಮಿಷ ಬೇಯಿಸಬೇಕು. ನಂತರ 1 ಕಪ್ ನೀರು ಹಾಕಿ ಮಧ್ಯಮ ಉರಿಯಲ್ಲಿ 25–30 ನಿಮಿಷ ಹಬೆಯಲ್ಲಿ ಬೇಯಿಸಿ. ಕೊನೆಯಯಲ್ಲಿ ಗರಂ ಮಸಾಲೆ ಮತ್ತು ಕೊತ್ತಂಬರಿ ಹಾಕಿ.

error: Content is protected !!