Sunday❌Devil Day✅| ಡಬಲ್ ಧಮಾಕ, ಅಂತೂ ಡಿ ಸೆಲೆಬ್ರಿಟಿಸ್ ವೇಟ್ ಮಾಡ್ತಿದ್ದ ಆ ದಿನ ಬಂದೇಬಿಡ್ತು!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದರ್ಶನ್ ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಗುಡ್‌ನ್ಯೂಸ್ ಸಿಕ್ಕಿದೆ. ದರ್ಶನ್ ನಟನೆಯ ಡೆವಿಲ್ ಸಿನಿಮಾದ `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್ ಇಂದು ರಿಲೀಸ್ ಆಗಿದೆ. ಸಾಂಗ್ ರಿಲೀಸ್ ಆಗಿ ಕೆಲವೇ ನಿಮಿಷಗಳಲ್ಲಿ ಚಿತ್ರದ ರಿಲೀಸ್ ಡೇಟ್ ಕೂಡಾ ಅನೌನ್ಸ್ ಆಗಿದೆ.

ಡೆವಿಲ್ ಸಿನಿಮಾ ಇದೇ ವರ್ಷ ಡಿಸೆಂಬರ್ 12ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈ ಸುದ್ದಿಯನ್ನ ದರ್ಶನ್ ಅವರ ಸಾಮಾಜಿಕ ಜಾಲತಾದಲ್ಲಿ ವಿಜಯಲಕ್ಷ್ಮಿ ಹಂಚಿಕೊಂಡಿದ್ದಾರೆ.

ದರ್ಶನ್ ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡ್ತಿರುವ ದರ್ಶನ್ ಪತ್ನಿ ಈ ಮೂಲಕ ದರ್ಶನ್ ಅಭಿಮಾನಿಗಳಿಗೆ ಧನ್ಯವಾದಗಳನ್ನ ಹೇಳಿದ್ದಾರೆ. `ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು. ನೀವು ಕಾತುರದಿಂದ ಕಾಯುತ್ತಿದ್ದ ದಿ ಡೆವಿಲ್ ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ’ ಎಂದು ತಮ್ಮ ಸೆಲೆಬ್ರಿಟಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಸಾಂಗ್ ನೋಡಿ ಸಂಭ್ರಮ ಪಡುತ್ತಿದ್ದ ಫ್ಯಾನ್ಸ್ ಸಿನಿಮಾ ರಿಲೀಸ್ ಡೇಟ್ ನೋಡಿ ಇನ್ನಷ್ಟು ಖುಷಿಯಿಂದ ಸಂಭ್ರಮಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!