ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಹೀರೋ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸುನೀಲ್ ಶೆಟ್ಟಿ ಪುತ್ರಿ ,ನಟಿ ಅಥಿಯಾ ಶೆಟ್ಟಿ ಚಿತ್ತರಂಗಕ್ಕೆ ಗುಡ್ ಬೈ ಹೇಳಿದ್ದಾರೆ.
ಈ ಕುರಿತು ತಂದೆ ಸುನೀಲ್ ಶೆಟ್ಟಿ ಸಂದರ್ಶನವೊಂದರಲ್ಲಿ ತಿಳಿಸಿದ್ದು, ನನಗೆ ಸಿನಿಮಾ ಬೇಡ, ನಟಿಸಲು ನನಗೆ ಇಷ್ಟವಿಲ್ಲವೆಂದು ಅಥಿಯಾ ಹೇಳಿದಕ್ಕಾಗಿ ನಾನು ಅಭಿನಂದಿಸುತ್ತೇನೆ. 2019ರ ‘ಮೋತಿಚೂರ್ ಚಕ್ನಾಚೂರ್’ ಚಿತ್ರದ ಬಳಿಕ ಹಲವು ಆಫರ್‌ಗಳು ಅವಳಿಗೆ ಸಿಕ್ಕಿತ್ತು. ಆಗ ಅಥಿಯಾ ನನಗೆ ಸಿನಿಮಾ ಬೇಡ, ನಾನು ಆರಾಮಾಗಿದ್ದೇನೆ ಗೊತ್ತಾ ಎಂದಿದ್ದಳು ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ಈ ಮೂಲಕ ಇನ್ಮುಂದೆ ಮಗಳು ಸಿನಿಮಾ ಮಾಡಲ್ಲ ಎಂಬುದನ್ನು ಅಧಿಕೃತವಾಗಿ ಹೇಳಿದ್ದಾರೆ.
ಅಥಿಯಾ ಸದ್ಯ ಮಗಳ ಕಡೆ ಗಮನ ಹರಿಸುತ್ತಿದ್ದಾಳೆ. ಈಗ ಅವಳು ಜೀವನದ ಬೆಸ್ಟ್ ರೋಲ್ ನಿರ್ವಹಿಸುತ್ತಿದ್ದಾಳೆ ಎಂದು ಸುನೀಲ್ ಶೆಟ್ಟಿ ತಿಳಿಸಿದ್ದಾರೆ.