ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣ ಬೆಳೆಸಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ.
ಸುನೀತಾ ವಿಲಿಯಮ್ಸ್ ಅವರ ಕುಟುಂಬ ಮೊದಲಿಗೆ ಗುಜರಾತ್‌ನ ಜುಲಾಸನ್ ಗ್ರಾಮದಲ್ಲೇ ಇತ್ತು. ಸುನೀತಾ ಅವರ ತಂದೆ ದೀಪಕ್ ಪಾಂಡ್ಯ ಅವರು 1957ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಅಲ್ಲಿ ಅವರು ಉರ್ಸುಲಿನ್ ಬೋನಿ ಅವರನ್ನು ವಿವಾಹವಾದರು. ಸೆಪ್ಟೆಂಬರ್ 19, 1965ರಂದು ಅಮೆರಿಕಾದ ಓಹಿಯೋದಲ್ಲಿ ಸುನಿತಾ ಜನಿಸಿದ್ದರು.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಗುಜರಾತ್ ಸರ್ಕಾರ, ಸುನೀತಾ ವಿಲಿಯಮ್ಸ್ ಅವರ ಭಾರತದ ಬೇರುಗಳು ಗುಜರಾತ್‌ನ ಜುಲಾಸನ್ ಗ್ರಾಮಕ್ಕೆ ಸೇರಿವೆ. ಒಂದು ಕಾಲದಲ್ಲಿ ಈ ಗ್ರಾಮ ಅವರ ತಂದೆಗೆ ನೆಲೆಯಾಗಿತ್ತು. ಈ ಸಣ್ಣ ಹಳ್ಳಿಯಲ್ಲಿ ಸುಮಾರು 7000 ಜನರು ವಾಸಿಸುತ್ತಿದ್ದಾರೆ, ಗಗನಯಾತ್ರಿ ತಮ್ಮ ಹಳ್ಳಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಅಂಶದ ಬಗ್ಗೆ ಅವರು ನಿಜಕ್ಕೂ ಹೆಮ್ಮೆಪಡುತ್ತಾರೆ ಎಂದು ಹೇಳಿದೆ. ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿರುವ ಸುನೀತಾ ವಿಲಿಯಮ್ಸ್ ಅವರ ಪೂರ್ವಜರ ಜುಲಾಸನ್ ಗ್ರಾಮಸ್ಥರು ಬುಧವಾರ ಬೆಳಿಗ್ಗೆ ಭವ್ಯ ಆಚರಣೆಗಳಿಗೆ ಸಿದ್ಧತೆ ಮಾಡಿಕೊಂಡಿದೆ. ಗ್ರಾಮಸ್ಥರು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.