ಭೂಮಿಯತ್ತ ಸುನೀತಾ ವಿಲಿಯಮ್ಸ್‌ ಪಯಣ: ಗುಜರಾತ್‌ನಲ್ಲಿ ಮನೆ ಮಾಡಿದ ಸಂಭ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್‌)ದಿಂದ ಭಾರತೀಯ ಮೂಲದ ಅಮೆರಿಕನ್‌ ಗಗನಯಾತ್ರಿ ಸುನೀತಾ ವಿಲಿಯಮ್ಸ್‌, ಭೂಮಿಗೆ ಸುರಕ್ಷಿತವಾಗಿ ಮರಳುತ್ತಿದ್ದಾರೆ.

ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ನ ಫಾಲ್ಕನ್‌-9 ಬಾಹ್ಯಾಕಾಶ ನೌಕೆಯು ಸುನೀತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಅವರನ್ನು ಭೂಮಿಗೆ ಕರೆತರುತ್ತಿದೆ.

ಈ ಮಧ್ಯೆ ಸುನೀತಾ ವಿಲಿಯಮ್ಸ್‌ ಅವರ ಸುರಕ್ಷಿತ ಮರಳುವಿಕೆಗೆ ಭಾರತದಾದ್ಯಂತ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಭಾರತೀಯ ಮೂಲದ ಗಗನಯಾತ್ರಿಯ ತವರೂರು ಗುಜರಾತ್‌ನ ಜುಲಾಸನ್‌ ಗ್ರಾಮದಲ್ಲಿ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

https://x.com/ANI/status/1901977607035662412?ref_src=twsrc%5Etfw%7Ctwcamp%5Etweetembed%7Ctwterm%5E1901977607035662412%7Ctwgr%5E96ff10d52720eda7746d09d01f9b508c560f2658%7Ctwcon%5Es1_&ref_url=https%3A%2F%2Fvijaykarnataka.com%2Fnews%2Findia%2Fsunita-williams-ancestral-village-in-gujarat-plans-for-grand-celebration-to-welcome-her-return-to-earth%2Farticleshow%2F119164978.cms

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿರುವ ಜುಲಾಸನ್‌ ಗ್ರಾಮ, ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರ ತಂದೆ ದೀಪಕ್‌ ಭಾಯ್‌‌ ಪಾಂಡ್ಯ ಅವರ ತವರೂರು. ಇದೀಗ ಈ ಗ್ರಾಮದಲ್ಲಿ ಸುನೀತಾ ವಿಲಿಯಮ್ಸ್‌ ಅವರ ಸುರಕ್ಷಿತ ಮರಳುವಿಕೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಸುನೀತಾ ವಿಲಿಯಮ್ಸ್‌ ಅವರ ಸುರಕ್ಷಿತ ಮರಳುವಿಕೆಯ ಕ್ಷಣ ಕ್ಷಣದ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.

ಜುಲಾಸನ್‌ ಗ್ರಾಮದಲ್ಲಿ ಸುನೀತಾ ವಿಲಿಯಮ್ಸ್ ಅವರ ತಂದೆ ದೀಪಕ್ ಭಾಯ್ ಪಾಂಡ್ಯ ಅವರ ಪೂರ್ವಜರ ಮನೆ ಇದೆ. ಇಲ್ಲಿ ದೀಪಕ್‌ ಪಾಂಡ್ಯಾ ಅವರ ಸಂಬಂಧಿಕರಿದ್ದು, ಅವರೊಡನೆ ಸಮಸ್ತ ಗ್ರಾಮಸ್ಥರು ಸುನೀತಾ ವಿಲಿಯಮ್ಸ್‌ ಅವರ ಸುರಕ್ಷತ ಆಗಮನಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಸುನೀತಾ ವಿಲಿಯಮ್ಸ್‌ ಅವರ ಸೋದರಸಂಬಂಧಿ ನವೀನ್ ಪಾಂಡ್ಯ, ‘ಸಹೋದರಿ ಸುನೀತಾ ವಿಲಿಯಮ್ಸ್‌ ಅವರ ಸುರಕ್ಷಿತ ಆಗಮನಕ್ಕೆ ನಾವೆಲ್ಲಾ ಕಾತರದಿಂದ ಕಾಯುತ್ತಿದ್ದೇವೆ. ಗ್ರಾಮದಲ್ಲಿ ದೀಪಾವಳಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಸುನೀತಾ ವಿಲಿಯಮ್ಸ್‌ ಭೂಮಿಗೆ ಬರುತ್ತಿದ್ದಂತೇ ಸಂಭ್ರಮಾಚರಣೆ ಆರಂಭಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!