ನೆದರ್‌ಲ್ಯಾಂಡ್‌ನಲ್ಲಿ ಎಲ್ಲರಿಗೂ ಸನ್‌ಸ್ಕ್ರೀನ್ ಉಚಿತ ಉಚಿತ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆಯಲ್ಲಿದ್ದರೂ ಕೂಡ ಸನ್‌ಸ್ಕ್ರೀನ್ ಹಚ್ಚೋದನ್ನು ಬಿಡಬಾರದು, ಬಿಸಿಲಿನಲ್ಲಿದ್ದಾಗ ಪ್ರತೀ ಎರಡು ಗಂಟೆಗೊಮ್ಮೆ ಸನ್‌ಸ್ಕ್ರೀನ್ ಹಚ್ಚಲೇಬೇಕು.. ಆದರೆ ಸಾಕಷ್ಟು ಮಂದಿ ಸನ್‌ಸ್ಕ್ರೀನ್ ಅತ್ಯಾವಶ್ಯಕ ಅನ್ನೋದನ್ನು ಈಗಲೂ ನಂಬೋದಿಲ್ಲ.

ಚರ್ಮದ ಕ್ಯಾನ್ಸರ್ ಪ್ರಮಾಣ ತಗ್ಗಿಸುವ ಸಲುವಾಗಿ ನೆದರ್‌ಲ್ಯಾಂಡ್‌ನಲ್ಲಿ ಎಲ್ಲರಿಗೂ ಉಚಿತ ಸನ್‌ಸ್ಕ್ರೀನ್ ನೀಡಲಾಗುತ್ತಿದೆ. ಶಾಲೆಗಳು, ಕಾಲೇಜು, ವಿಶ್ವವಿದ್ಯಾಲಯ, ಸಮಾರಂಭ, ಪಾರ್ಕ್, ಕ್ರೀಡಾ ಕಾರ್ಯಕ್ರಮಗಳು ನಡೆಯುವ ಹಾಗೂ ಸಾಕಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಸನ್‌ಸ್ಕ್ರೀನ್ ವಿತರಣೆ ಮಾಡಲಾಗುತ್ತಿದೆ.

ಮನೆಯಿಂದ ಹೊರಬರುವಾಗ ಬೇಸಿಗೆಯಲ್ಲಿ ಯಾವ ರೀತಿ ಉಡುಪುಗಳನ್ನು ಧರಿಸಬೇಕು, ಎಷ್ಟು ಸನ್‌ಸ್ಕ್ರೀನ್ ಹಚ್ಚಬೇಕು, ಇದರ ಉಪಯೋಗ ಏನು ಎನ್ನುವ ಬಗ್ಗೆ ಅಲ್ಲಿನ ಸರ್ಕಾರ ಅರಿವು ಮೂಡಿಸುತ್ತಿದೆ.

ಸಾಕಷ್ಟು ಮಂದಿ ಚರ್ಮ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ಇದನ್ನು ಹೊಡೆದೋಡಿಸಲು ಸನ್‌ಸ್ಕ್ರೀನ್ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here