ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್(52) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಅಧಿಕಾರಿಗಳಾದ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್, ಬ್ಯಾಂಕ್ ಅಧಿಕಾರಿ ಸುಚಿಸ್ಥನಾ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಘಟನೆ ಕುರಿತು ಮಾತನಾಡಿದ ಮೃತ ಚಂದ್ರಶೇಖರ್ ಪತ್ನಿ ಕವಿತಾ, ‘ ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ, ಲೂಟಿಯನ್ನೂ ಮಾಡಿಲ್ಲ. ಒತ್ತಡ ಹಾಕಿ ನನ್ನ ಪತಿ ಜೀವ ತೆಗೆದಿದ್ದಾರೆ. ಡೆತ್ನೋಟ್ನಲ್ಲಿ ಅವರು ಎಲ್ಲವನ್ನೂ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ನನ್ನ ಪತಿ ನಿಯತ್ತಿನ ನಾಯಿ ರೀತಿ ಸರ್ಕಾರದ ಕೆಲಸ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ತಾರೆ ಅಂದರೆ ಎಷ್ಟು ಒತ್ತಡ ಇತ್ತು ಊಹೆ ಮಾಡಿ ಎಂದು ಕಣ್ಣೀರಿಟ್ಟಿದ್ದಾರೆ. .
ಪತಿ ಡೆತ್ ನೋಟ್ನಲ್ಲಿ ಮೂರು ಹೆಸರು ಉಲ್ಲೇಖ ಮಾಡಿದ್ದಾರೆ. ಆ ಮೂರು ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು. ‘ನಾನು ಎರಡು ಮಕ್ಕಳು ಇಟ್ಟುಕೊಂಡು ಕಷ್ಟ ಪಡುತ್ತಿದ್ದೇವೆ. ನನ್ನ ಪತಿ ಸಂಬಳ ಬಿಟ್ಟರೆ ಬೇರೆ ಏನು ಇರಲಿಲ್ಲ. ‘ನನ್ನ ಗಂಡನ ಸಾವಿಗೆ ನ್ಯಾಯ ಬೇಕು. ನನ್ನ ಈ ಪತಿ ಕುರಿತು ಯಾವುದೇ ಸಂಗತಿ ನನ್ನ ಬಳಿ ಹಂಚಿಕೊಂಡಿಲ್ಲ. ತನಿಖೆ ಆಗಿ ನನ್ನ ಗಂಡನ ಸಾವಿಗೆ ಸಿಗಬೇಕು ಎಂದು ಮೃತರ ಪತ್ನಿ ಕವಿತಾ ಅವರು ನ್ಯಾಯ ಕೇಳಿದ್ದಾರೆ.