ತುಂಗಭದ್ರಾ ಜಲಾಶಯದಿಂದ ರಾಂಪೂರ ಕೆರೆಗೆ ನೀರು ಪೂರೈಕೆ: ರವಿ ಬೋಸರಾಜು

ಹೊಸ ದಿಗಂತ ವರದಿ, ರಾಯಚೂರು :

ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ತುಂಗಭದ್ರ ಜಲಾಶಯದಿಂದ ರಾಂಪೂರ ಜಲಾಶಯಕ್ಕೆ ನೀರು ಬಿಡಲಾಗಿದ್ದು ನಗರಕ್ಕೆ ಸಮರ್ಪಕ ನೀರು ಪೂರೈಗೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಂತೆ ನಗರಸಭೆ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಅಧಿಕಾರಿಗಳಿಗೆ ತಿಳಿಸಿದರು.

ಶನಿವಾರ ರಾಂಪೂರ ಜಲಾಶಯ ಹಾಗೂ ಜಲ ಶುದ್ದೀಕರಣ ಘಟಕಕ್ಕೆ ನಗರಸಭೆ ಸದಸ್ಯರೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರಸಭೆ ಆಯುಕ್ತ ಗುರಲಿಂಗಪ್ಪ ಸೇರಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ಈ ವಿಷಯವನ್ನು ತಿಳಿಸಿದರು.

ರಾಂಪೂರ ಜಲಾಶಯದಲ್ಲಿ ನೀರಿನ ಕೊರತೆಯಾಗಿದ್ದ ಪರಿಣಾಮವಾಗಿ ರಾಯಚೂರು ನಗರಕ್ಕೆ ನೀರು ಪೂರೈಕೆಯಲ್ಲಿ ಕಳೆದ ಮೇ ತಿಂಗಳಿನಿoದ ಜನತೆಗೆ ಸಮರ್ಪಕವಾಗಿ ನೀರು ಪೂರೈಕೆ ಸಾಧ್ಯವಾಗಿರಲಿಲ್ಲ. ಸಮರ್ಪಕ ನೀರು ಪೂರೈಕೆಗಾಗಿ ಶುಕ್ರವಾರ ತುಂಗಭದ್ರ ಜಲಾಶಯದಿಂದ ರಾಂಪೂರ ಜಲಾಷಯಕ್ಕೆ ನೀರು ಬಿಡಲಾಗಿದ್ದು ಸಮರ್ಪಕವಾಗಿ ನೀರು ಪೂರೈಸಲು ಬೇಕಾದ ಅಗತ್ಯ ಕ್ರಮಗಳ ಕುರಿತು ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ನಗರದ ನೀರಿನ ಸಮಸ್ಯೆ ಪರಿಹರಿಸಲು ತುಂಗಭದ್ರಾ ಜಲಾಶಯದಿಂದ ನೀರು ಬಿಡುವಂತೆ ಮುಖ್ಯಮಂತ್ರಿಗಳು ಹಾಗೂ ಸಂಬoಧಿಸಿದ ಸಚಿವರೊಂದಿಗೆ ಚರ್ಚಿಸಿದ ಪರಿಣಾಮವಾಗಿ ಶುಕ್ರವಾರ ತುಂಗಭದ್ರ‍್ರಾ ಜಲಾಶಯದಿಂದ ಬಂಗಾರಪ್ಪ ಕೆರೆಗೆ ಹಾಗೂ ರಾಂಪೂರ ಜಲಾಶಯಕ್ಕೆ ನೀರು ಬಿಡಲಾಗಿದೆ ಎಂದರು.

ನೀರಿನ ಗುಣಮಟ್ಟ ತಪಾಸಣೆ ಮಾಡಿ ನೀರು ಪೂರೈಕೆ ಮಾಡಿ
ಕಲುಷಿತ ನೀರು ಸೇವನೆಯಿಂದ ನಗರದ ಜನತೆ ಅನೇಕ ತೊಂದರೆಗಳನ್ನು ಅನುಭವಿಸಿದ್ದಾರೆ. ಶುದ್ಧ ಹಾಗೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವುದೂ ಸೇರಿದಂತೆ ಜಲ ಶುದ್ದೀಕರಣ ಘಟಕದ ಸ್ವಚ್ಚತೆಯನ್ನು ಕಾಯ್ದುಕೊಳ್ಳಬೇಕು ಹಾಗೂ ನಿತ್ಯ ನೀರಿನ ಗುಣಮಟ್ಟ ತಪಾಸಣೆ ಮಾಡಿ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಹೇಳಿದರು.

ರಾಂಪೂರ ಕೆರೆಯ ನೀರು ಭೂ-ತೇವಾಂಶದ ಮೂಲಕ ಪೋಲಾಗುತ್ತಿದೆ ಇದರಿಂದ ಮತ್ತಷ್ಟು ನೀರಿನ ಸಮಸ್ಯೆಯಾಗುವ ಸಾದ್ಯತೆಯಿದ್ದು, ನೀರು ಪೋಲಾಗದಂತೆ ಅಗತ್ಯ ಕ್ರಮಕೈಗೊಳ್ಳುವುದು ಕಲುಷಿತ ನೀರು ಸರಬರಾಜಾಗದಂತೆ ಸಿಬ್ಬಂದಿಗಳು ಎಚ್ಚರ ವಹಿಸುವಂತೆ ತಿಳಿಸಿದರು.

ನಗರದಲ್ಲಿ ನೀರು ಪೂರೈಕೆ ಪೈಪಲೈನ್‌ಗಳು ಕೆಲವೆಡೆ ಒಡೆದಿರುವ ಪರಿಣಾಮ ಖನಿಜ ಮಿಶ್ರಿತ ನೀರು ಪೂರೈಕೆಯಾಗುತ್ತಿರುವುದು ಕಂಡುಬದಿದೆ ಈ ಲೋಪಗಳನ್ನು ಸರಿಪಡಿಸಿ ಶುದ್ಧ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದರು.

ಪೌರಾಯುಕ್ತ ಗುರುಲಿಂಗಪ್ಪ ಮಾತನಾಡಿ, ಪ್ರತಿ ನಿತ್ಯ ನೀರು ತಪಾಸಣೆ ಮಾಡಲಾಗುತ್ತಿದೆ, ಅಲ್ಲಲ್ಲಿ ಕಲುಷಿತ ನೀರು ಸರಬರಾಜಾಗಿರುವುದು ಕಂಡುಬoದಿದೆ ಅಂತಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜಯಣ್ಣ, ಕಾಂಗ್ರೆಸ್ ಮುಖಂಡರಾದ ಮೊಹ್ಮದ್ ಶಾಲಂ, ನರಸಿಂಹಲು ಮಾಡಗಿರಿ, ಜಿಂದಪ್ಪ, ಸಾಜೀದ್ ಸಮೀರ್, ಬಿ ರಮೇಶ, ತಿಮ್ಮಾರಡ್ಡಿ, ವಾಹೀದ್, ಅಫ್ಜಲ್ ಅಲಿ ನಾಯಕ್, ಸಣ್ಣ ನರಸರಡ್ಡಿ, ಭೀಮಣ್ಣ, ಹರಿಬಾಬು ರಾಂಪೂರ, ತಿಮ್ಮಪ್ಪ ನಾಯಕ್, ಹಾಜಿ ಬಾಬ, ರಾಮು ಗಿಲೇರಿ ಸೇರಿದಂತೆ ಅನೇಕರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!