ಹೊಸ ದಿಗಂತ ಡಿಜಿಟಲ್ ಡೆಸ್ಕ್:
‘ಆಪರೇಷನ್ ಸಿಂದೂರ’ದ ಭಾರತೀಯ ಯೋಧರಿಗೆ ಬೆಂಬಲ ಸೂಚಿಸಿ ಇಂದು ರಾಜ್ಯ ಕಾಂಗ್ರೆಸ್ ವತಿಯಿಂದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಇಂದು ಬೆಳಗ್ಗೆ 9:30ಕ್ಕೆ ಆರಂಭವಾಗುವ ಈ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ವಹಿಸಲಿದ್ದು, ಬೆಂಗಳೂರಿನ ಕೆ.ಆರ್.ವೃತ್ತದಿಂದ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬಳಿ ಇರುವ ಮಿನ್ಸ್ಕ್ಸ್ಕ್ವೇರ್ವರೆಗೆ ಯಾತ್ರೆ ನಡೆಯಲಿದೆ.
ಈ ಯಾತ್ರೆಯಲ್ಲಿ ಸರ್ಕಾರದ ಎಲ್ಲಾ ಸಚಿವರು, ಶಾಸಕರು, ಕೆಪಿಸಿಸಿ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಪಕ್ಷ ಈಗಾಗಲೇ ಸೂಚನೆ ನೀಡಿದೆ.
‘ದೇಶಪ್ರೇಮ ಮೆರೆಯೋಣ, ಐಕ್ಯತೆ ಸಾರೋಣ’ ಎಂಬ ಘೋಷವಾಕ್ಯದಡಿ ನಡೆಯುವ ಈ ಯಾತ್ರೆಯಲ್ಲಿ ಸರ್ಕಾರಿ, ಖಾಸಗಿ ನೌಕರರು, ಚಿತ್ರರಂಗ, ಎಲ್ಲಾ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಯಾತ್ರೆಯಲ್ಲಿ ಭಾರದ ಧ್ವಜ ಬಳಸಲು ಮಾತ್ರ ಅವಕಾಶವಿದೆ.
ಬ್ರದರ್ಸ್ ಪಾಕಿಸ್ತಾನ ಪರ ಘೋಷಣೆ,ಧ್ವಜ ಪ್ರದರ್ಶನ ಸಾಧ್ಯತೆ ಖಂಡಿತ ಇದೆ.ಅಂತೆಯೇ ರಾಷ್ಟ್ರೀಯ ವಾದಿಗಳು ಪಾಕಿಸ್ತಾನ ಧ್ವಜಗಳನ್ನು ರಸ್ತೆಗೆ ಹಾಸಿ ಮೆಟ್ಟಿಕೊಂಡು ಹೋಗುವ ಸಾಧ್ಯತೆಯೂ
ಸಾಕಷ್ಟಿದೆ. ಪಾಪ ರಾಜ್ಯ ಸರಕಾರಕ್ಕೆ ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ. ಬಿಸಿ ತುಪ್ಪ ನಿಂದಲೂ ಆಗದು ಉಗುಳಲು ತುಪ್ಪದ ಮೌಲ್ಯ,ಗುಣ.