ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಟ್ ಆ್ಯಂಡ್ ರನ್ ಕಾಯ್ದೆ ವಿರೋಧಿಸಿ ಲಾರಿ ಮಾಲೀಕರು ಮುಷ್ಕರ ನಡೆಸಲು ತೀರ್ಮಾನಿಸಿದ್ದು,ದೇಶಾದ್ಯಂತ ನಡೆಯುತ್ತಿರುವ ಲಾರಿ ಮಾಲೀಕರ ಹಾಗೂ ಚಾಲಕರ ಮುಷ್ಕರಕ್ಕೆ ರಾಜ್ಯದಿಂದ ಬೆಂಬಲ ವ್ಯಕ್ತವಾಗಿದೆ.
ಕೇಂದ್ರದ ಹಿಟ್ ಆ್ಯಂಡ್ ರನ್ ಕಾಯ್ದೆ ವಾಪಸ್ಸಿಗೆ ಆಗ್ರಹಿಸಿ ಜನವರಿ17 ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಬೆಂಗಳೂರು ಚಾಮರಾಜಪೇಟೆಯಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಿ ಈ ಕುರಿತು ತೀರ್ಮಾನ ಕೈಕೊಂಡರು.
ಸಭೆಯ ಬಳಿಕ ನಡೆಸಲಿರೋ ಲಾರಿ ಮಾಲೀಕರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅಧ್ಯಕ್ಷ ಚನ್ನಾರೆಡ್ಡಿ, ಮುಷ್ಕರಕ್ಕೆ ರಾಜ್ಯದ ಬೆಂಬಲ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ಹಿಟ್ ಆ್ಯಂಡ್ ರನ್ ಕಾಯ್ದೆನ್ನ ನಾವು ಖಂಡಿಸುತ್ತಾ ಜನವರಿ 17 ರಿಂದ ಕರ್ನಾಟಕದಲ್ಲಿ ಲಾರಿ ಓಡಲ್ಲ. ಲಾರಿ ಮಾಲೀಕರಿಂದ ಮುಷ್ಕರ ಮಾಡ್ತಾ ಇದ್ದೇವೆ.
ಕಾಯ್ದೆ ಯಿಂದ ಲಾರಿ ಮಾಲೀಕರ ಹಾಗೂ ಚಾಲಕರಿಗೆ ತೊಂದರೆ ಅಗಲಿದೆ, ಕಾಯ್ದೆ ಅಡಿ ಲಕ್ಷ ಲಕ್ಷ ದಂಡ ಕಟ್ಟೋಕ್ಕೆ ಚಾಲಕರಿಂದ ಸಾಧ್ಯವಿಲ್ಲ. ಇದನ್ನು ವಿರೋಧಿಸಿ ಬೆಂಬಲ ಸೂಚಿಸಿತ್ತೇವೆ ಎಂದಿದ್ದಾರೆ.
ಸಭೆಯಲ್ಲಿ ರಾಜ್ಯದ ಲಾರಿ ಮಾಲೀಕರು,ಚಾಲಕರು ಬೇರೆ ಬೇರೆ ರಾಜ್ಯದ ಲಾರಿ ಮಾಲೀಕರು ಬಾಗಿದಕ್ಷಿಣ ಭಾರತದ ಎಲ್ಲಾ ಲಾರಿ ಮಾಲೀಕರ ಸಂಘಟನೆಗಳು ಬಾಗಿ ತಮಿಳನಾಡು, ಮುಂಬೈ, ಕೇರಳ, ಹೈದ್ರಾಬಾದ್, ಚನೈ ಸೇರಿ ಇತರೆ ರಾಜ್ಯಗಳ ಲಾರಿ ಮಾಲೀಕರು ಬಾಗಿಯಾಗಿದ್ದಾರೆ.