ಹೊಸದಿಗಂತ ಡಿಜಿಟಲ್ ಡೆಸ್ಕ್
ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಗೆ ನಡೆಸುವ ಎರಡು ಬೆರಳುಗಳ (Two Finger Test) (ಕನ್ಯತ್ವ) ಪರೀಕ್ಷೆಯನ್ನು ಮುಂದುವರೆಸದಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ಈ ರೀತಿಯ ಪರೀಕ್ಷೆಯಿಂದ ಆರೋಪಿಗಳನ್ನು ನಿರ್ಧರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಸ್ಪಷ್ಟವಾಗಿ ಹೇಳಿದೆ. ಎರಡು ಬೆರಳಿನ ಪರೀಕ್ಷೆ ಇಂದಿಗೂ ನಡೆಯುತ್ತಿರವುದು ವಿಷಾದನೀಯ. ಈ ರೀತಿಯ ಅವೈಜ್ಞಾನಿಕ ಪದ್ಧತಿಗಳು ಮುಂದುವರೆಯಬಾರದು ಎಂದು ಸುಪ್ರೀಂ ಸೂಚಿಸಿದೆ.
2013 ರಿಂದ ಪ್ರಾರಂಭವಾಗುವ ತೀರ್ಪುಗಳಿಗೆ ಅನ್ವಯಿಸುವಂತೆ ಎರಡು ಬೆರಳಿನ ಪರೀಕ್ಷೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ ಎಂದು ಒತ್ತಿಹೇಳುತ್ತಾ, ಅಭ್ಯಾಸದ ಮುಂದುವರಿಕೆಯ ಬಗ್ಗೆ ಪೀಠವು ಅಸಮಾಧಾನ ವ್ಯಕ್ತಪಡಿಸಿತು.
“ಈ ನ್ಯಾಯಾಲಯವು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವನ್ನು ಆಪಾದಿಸುವ ಪ್ರಕರಣಗಳಲ್ಲಿ ಎರಡು ಬೆರಳು ಪರೀಕ್ಷೆಯ ಬಳಕೆಯನ್ನು ಪದೇ ಪದೇ ನಿರಾಕರಿಸಿದೆ. ಪರೀಕ್ಷೆ ಎಂದು ಕರೆಯಲ್ಪಡುವ ಈ ಪರೀಕ್ಷೆಯು ಯಾವುದೇ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ. ಮತ್ತು ಅತ್ಯಾಚಾರದಿಂದ ಬದುಕುಳಿದವರನ್ನು ಪರೀಕ್ಷಿಸುವ ಆಕ್ರಮಣಕಾರಿ ವಿಧಾನವಾಗಿದೆ. ಇದು ಮಹಿಳೆಯರನ್ನು ಪುನಃ ಬಲಿಪಶುಗೊಳಿಸುತ್ತದೆ ಮತ್ತು ಮರು-ಆಘಾತಗೊಳಿಸುತ್ತದೆ. ಎರಡು ಬೆರಳುಗಳ ಪರೀಕ್ಷೆಯನ್ನು ನಡೆಸಬಾರದು” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅವರು ಹೇಳಿದ್ದಾರೆ.
“ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುವುದಿಲ್ಲ ಎಂಬ ತಪ್ಪು ಊಹೆಯನ್ನು ಪರೀಕ್ಷೆಯು ಆಧರಿಸಿದೆ. ಇದರರಿದ ಯಾವುದೇ ಸತ್ಯ ಹೊರಬರಲು ಸಾಧ್ಯವಿಲ್ಲ ” ಎಂದು ಹೇಳಿದೆ.
ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಒಳಗಾದವರು ಎರಡು ಬೆರಳಿನ ಪರೀಕ್ಷೆ ಒಳಪಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವಂತೆ ಸುಪ್ರೀಂ ಕೇಂದ್ರ ಆರೋಗ್ಯ ಸಚಿವಾಲಯಗಳಿಗೆ ನಿರ್ದೇಶನ ನೀಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ