ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಶ್ಲೀಲ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದ ಆನ್‌ಲೈನ್ ಕಂಟೆಂಟ್ ಕ್ರಿಯೇಟರ್ ರಣವೀರ್ ಅಲಹಾಬಾದಿಯಾಗೆ ಬಿಗ್ ರಿಲೀಫ್ ಸಿಕ್ಕಿದೆ. ರಣವೀರ್ ನಡೆಸುತ್ತಿದ್ದ ದಿ ರಣವೀರ್ ಶೋ ನ ಪ್ರಸಾರಕ್ಕೆ ಹಾಕಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವು ಮಾಡಿ ಎಚ್ಚರಿಕೆ ನೀಡಿದೆ.
ಯೂಟ್ಯೂಬ್‌ನಲ್ಲಿ ಪ್ರಸಾರವಾಗುವ ಈ ಶೋದಲ್ಲಿ ನೈತಿಕತೆ ಮತ್ತು ಸಭ್ಯತೆ ಕಾಯ್ದುಕೊಳ್ಳಬೇಕು ಹಾಗೂ ಎಲ್ಲಾ ವಯೋಮಾನವದವರೂ ಈ ಶೋ ವೀಕ್ಷಿಸುವಂತಿರಬೇಕು ಎಂದು ಸಲಹೆ ಸ್ವರೂಪದಲ್ಲಿ ಎಚ್ಚರಿಕೆಯನ್ನೂ ನೀಡಿದೆ. ಜೊತೆಗೆ, ಹಿಂದೆ ನೀಡಿದ್ದ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿದೆ. ತಮ್ಮ ವಿರುದ್ಧದ ತನಿಖೆಗೆ ಸಹಕರಿಸುವಂತೆಯೂ ಸೂಚಿಸಿದೆ.
ಯೂಟ್ಯೂಬ್ ರಿಯಾಲಿಟಿ ಶೋವೊಂದರಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಅಲಹಾಬಾದಿಯ ಹಾಗೂ ಮತ್ತಿತರರ ವಿರುದ್ಧ ಮಹಾರಾಷ್ಟ್ರ, ಒಡಿಶಾ, ಅಸ್ಸಾಂನಲ್ಲಿ ಕೇಸ್ ದಾಖಲಾಗಿತ್ತು.