ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ತೀರ್ಪಿನ ಬಗ್ಗೆ ಮಾತನಾಡಿದ್ದಾರೆ.
ಸುಪ್ರೀಂ ತೀರ್ಪಿನಿಂದ ನಿರಾಸೆಯಾಗಿದೆ ನಿಜ ಆದರೆ ಹತಾಷೆಯಾಗಿಲ್ಲ. ಮತ್ತೆ ಪ್ರಯತ್ನಿಸುತ್ತೇನೆ, ಹೋರಾಟ ಮುಂದುವರಿಯುತ್ತದೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಇದು ದುಃಖದ ಸುಧೀರ್ಘವಾದ ಸಂಜೆ ಆದರೆ ಸಂಜೆಯಷ್ಟೇ, ಮತ್ತೆ ಬೆಳಕಾಗಲೇಬೇಕು ಎಂಬರ್ಥದ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಸುಪ್ರೀಂ ತೀರ್ಪಿಗೂ ಮುನ್ನ ಒಮರ್ ಅಬ್ದುಲ್ಲಾ ಮಾತನಾಡಿದ್ದು, ತಮ್ಮ ಪರವಾಗಿ ತೀರ್ಪು ಬರುವ ಭರವಸೆ ಇದೆ ಎಂದು ಹೇಳಿಕೊಂಡಿದ್ದರು