ಜೈಲಿನಿಂದ ಬಿಡುಗಡೆಯಾದ ಸೂರಜ್ ರೇವಣ್ಣ ಕೊಟ್ರು ಫಸ್ಟ್ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಸೂರಜ್​ ರೇವಣ್ಣಗೆ ಜಾಮೀನು ಸಿಕ್ಕಿದ್ದು, ಇಂದು(ಜುಲೈ 23) ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜೈಲಿನಿಂದ ಆಚೆಬಂದ ಬಳಿಕ ಸೂರಜ್ ಅವರು ಮೊಲದ ಬಾರಿಗೆಮಾತನಾಡಿದ್ದು, ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಿ ತೇಜೋವಧೆ ಮಾಡಿದ್ದಾರೆ. ತೇಜೋವಧೆ ಮಾಡುವ ದುರುದ್ದೇಶದಿಂದ ಕೇಸ್ ದಾಖಲಿಸಿದ್ದಾರೆ. ನಾವು ಯಾವುದಕ್ಕೂ ಹೆದರಿಕೊಂಡು ಎಲ್ಲಿಗೂ ಓಡಿಹೋಗಲ್ಲ 2-3 ದಿನದಲ್ಲಿ ಎಲ್ಲದಕ್ಕೂ ಸ್ಪಷ್ಟನೆ ಕೊಡ್ತೇನೆ ಎಂದು ಹೇಳಿದರು.

ತನಿಖಾಧಿಕಾರಿಗಳಿಗೆ ಸಹಕಾರ ನೀಡಿದ್ದೇನೆ. ಕಾನೂನು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಇದು ಕೇಸ್ ಅಲ್ಲ, ಷಡ್ಯಂತ್ರ ಕುತಂತ್ರ. ಶಿವಕುಮಾರ್ ಆಪ್ತ ಸಹಾಯಕನಲ್ಲ, ಕಾರು ಚಾಲಕನೂ ಅಲ್ಲ. ನಮಗೆ ಲೋಕೇಶ್ ಅಂತಾ ಒಬ್ಬನೇ ಕಾರು ಚಾಲಕ. ಹಾಸನದಲ್ಲಿ ರೇವಣ್ಣರಿಗಾಗಲಿ ನಮಗಾಗಲಿ ಕಪ್ಪುಚುಕ್ಕೆ ಇಲ್ಲ. ರಾಜಕೀಯವಾಗಿ ನಮ್ಮನ್ನು ಕುಗ್ಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ತಿಳಿಸಿದರು.

ರಾಜಕೀಯವಾಗಿ ಹಾಸನ ಜಿಲ್ಲೆಯಲ್ಲಿ ನಮ್ಮನ್ನು ಕುಗ್ಗಿಸುವ ಷಡ್ಯಂತ್ರ ಅಷ್ಟೇ. ಮೊದಲ ದಿನದಿಂದಲೂ ತನಿಖೆಗೆ ಸಹಕರಿಸಿದ್ದೇನೆ. ನಾನೇನು ಹೆದರಿಕೊಂಡು ಎಲ್ಲಿಯೋ ಓಡಿಹೋಗಲ್ಲ ಎಂದು ಹೇಳಿದರು.

ನಮ್ಮ ಕುಟುಂಬ ಮತ್ತು ಹಾಸನ ಜಿಲ್ಲೆಯ ರಾಜಕಾರಣವನ್ನ ಕುಸಿತಗೊಳಿಸಬೇಕು ಅಂದುಕೊಂಡಿದ್ದಾರೆ. ಯಾರು ಎಂಬುವ ಬಗ್ಗೆ ಎಲ್ಲದಕ್ಕೂ ಸದ್ಯದಲ್ಲೇ ಉತ್ತರವನ್ನ ಕೊಡ್ತೀನಿ. ಮೊದಲನೇ ದಿನದಿಂದಲೂ ತನಿಖೆಗೆ ಸಹಕರಿಸುತ್ತೇದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಓಡೋಗೋದಿಲ್ಲ. ನನಗೆ ನ್ಯಾಯಾಂಗ ಮತ್ತು ಕಾನೂನಿನ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!