ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯಲ್ಲಿ 400 ಸೀಟ್ ಗೆಲ್ಲೋದು ಅನುಮಾನವೇ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲಿ ಮಾತನಾಡಿದ್ದಾರೆ.
ಭಾರತ್ ಮಾತಾಕಿ ಜೈ ಎಂದು ಕನ್ನಡದಲ್ಲಿಯೇ ಪ್ರಧಾನಿ ಮಾತನಾಡಿದ್ದು,” ಅಬ್ ಕಿ ಬಾರ್ ಚಾರ್ಸೋ ಪಾರ್” ಎಂದು ಹೇಳಿದ್ದಾರೆ. ರಾಜ್ಯದ ಜನ 400 ಸೀಟ್ ಗೆಲ್ಲಿಸಲು ತೀರ್ಮಾನಿಸಿದ್ದಾರೆ ಎಂದಿದ್ದಾರೆ.
ಜನ ಬಿಜೆಪಿಗೆ ಬಹಳ ಭರವಸೆಯಿಂದ ನೋಡ್ತಿದ್ದಾರೆ. ವಿಕಸಿತ ಭಾರತ ನಿರ್ಮಾಣ ದೃಷ್ಟಿಯಿಂದ ಜನ ನೋಡ್ತಿದ್ದಾರೆ. ನಾನು ವಿಶ್ವಾಸದಿಂದ ಹೇಳ್ತಿದ್ದೇನೆ, ದೇಶ ತನ್ನ ಸಂಕಲ್ಪ ಪೂರ್ಣ ಮಾಡಲು ತೀರ್ಮಾನ ಮಾಡಿದೆ. ಕಾಂಗ್ರೆಸ್ ಪರಿವಾರವಾದದಿಂದ ಜನ ಬೇಸತ್ತು ಹೋಗಿದ್ದಾರೆ. ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
#WATCH | Kalaburagi, Karnataka: Prime Minister Narendra Modi says, “These people sat in the government after making big promises to the youth, but today they are stopping the scholarship of the same youth and cutting the scholarship. It is the Congress which It is committing the… pic.twitter.com/8Rc5HsAVgF
— ANI (@ANI) March 16, 2024