ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಕೆ ಸುರೇಶ್ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿನ ಬೇಕಾದ್ರೂ ಕಣಕ್ಕಿಳಿಸಿ, ಗೆಲುವು ನಮ್ಮದೇ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಬೆಂಗಳೂರು ಗ್ರಾಮಾಂತರದಲ್ಲಿ ಸ್ಪರ್ಧೆ ಮಾಡ್ತಾರೆ. ಅಲ್ಲಿ ಕುಮಾರಸ್ವಾಮಿ ಅವ್ರೇ ನಿಂತ್ರು ನಾವು ಅಭ್ಯರ್ಥಿ ಬದಲು ಮಾಡೋದಿಲ್ಲ ಎಂದಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಎಲ್ಲರ ವಿರುದ್ಧ ಸ್ಪರ್ಧೆ ಮಾಡಿ ಗೆದ್ದಿದ್ದೇನೆ. ನನ್ನ ತಮ್ಮನ ವಿರುದ್ಧ ಅನಿತಾ ಕುಮಾರಸ್ವಾಮಿ ನಿಂತಿದ್ದಾಗ್ಲೂ ಆತನೇ ಗೆದ್ದಿದ್ದಾನೆ ಎಂದಿದ್ದಾರೆ.