ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸುರಿನಾಮ್‌ ಅತ್ಯುನ್ನತ ನಾಗರಿಕ ಪ್ರಶಸ್ತಿ: ಪ್ರಧಾನಿ ಮೋದಿ ಶುಭ ಹಾರೈಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸುರಿನಾಮ್‌ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸುರಿನಾಮ್‌ ದೇಶದ ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್ ಅನ್ನು ದ್ರೌಪದಿ ಮುರ್ಮು ಅವರಿಗೆ ನೀಡಲಾಯಿತು. ಈ ಸಂಬಂಧ ಪ್ರಧಾನಿ ಮೋದಿ ರಾಷ್ಟ್ರಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

‘ಸುರಿನಾಮ್ ಸರ್ಕಾರ ಮತ್ತು ಜನರ ಈ ವಿಶೇಷ ಗೆಸ್ಚರ್ ನಮ್ಮ ದೇಶಗಳ ನಡುವಿನ ನಿರಂತರ ಸ್ನೇಹವನ್ನು ಸಂಕೇತಿಸುತ್ತದೆ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದು, ರಾಷ್ಟ್ರಪತಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

‘ಸುರಿನಾಮ್‌ನ ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಬಹಳ ಗೌರವವಿದೆ ಎಂದು ಟ್ವೀಟ್‌ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಹರ್ಷ ವ್ಯಕ್ತಪಡಿಸಿದ್ದಾರೆ. “ಈ ಮನ್ನಣೆಯು ನನಗೆ ಮಾತ್ರವಲ್ಲದೆ ನಾನು ಪ್ರತಿನಿಧಿಸುವ ಭಾರತದ 1.4 ಶತಕೋಟಿ ಜನರಿಗೆ ಸಹ ಮಹತ್ತರವಾದ ಮಹತ್ವವನ್ನು ಹೊಂದಿದೆ. ನಮ್ಮ ಎರಡು ದೇಶಗಳ ನಡುವಿನ ಭ್ರಾತೃತ್ವದ ಬಾಂಧವ್ಯವನ್ನು ಉತ್ಕೃಷ್ಟಗೊಳಿಸುವಲ್ಲಿ ನಾಕ್ಷತ್ರಿಕ ಪಾತ್ರವನ್ನು ವಹಿಸಿರುವ ಭಾರತೀಯ -ಸುರಿನಾಮಿಗಳ ಸಮುದಾಯದ ಸತತ ಪೀಳಿಗೆಗೆ ನಾನು ಈ ಗೌರವವನ್ನು ಅರ್ಪಿಸುತ್ತೇನೆ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.

ಭಾರತದ ಸಾಗರೋತ್ತರ ಪೌರತ್ವ (ಒಸಿಐ) ಕಾರ್ಡ್‌ಗಾಗಿ ಅರ್ಹತಾ ಮಾನದಂಡಗಳನ್ನು ನಾಲ್ಕನೇ ತಲೆಮಾರಿನಿಂದ ಆರನೇ ತಲೆಮಾರಿಗೆ ವಿಸ್ತರಿಸಲು ಭಾರತ ಸರ್ಕಾರವು ಅನುಮೋದನೆ ನೀಡಿದೆ ಎಂದು ರಾಷ್ಟ್ರಪತಿ ಘೋಷಿಸಿದರು.ಇದು ಅವರ ಪೂರ್ವಜರು ಮೊದಲ ಹಡಗು-ಲಲ್ಲಾ ರೂಖ್‌ನಲ್ಲಿ ಸುರಿನಾಮ್‌ಗೆ ಬಂದವರಿಗೆ OCI ಕಾರ್ಡ್‌ಗಳನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!