ಮಣಿಪುರ ಹಿಂಸಾಚಾರ: ಸೇನೆಗೆ ಮುತ್ತಿಗೆ ಹಾಕಿದ 1,200 ಮಂದಿ, 12 ಉಗ್ರರ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಅಂತರ್ ಜನಾಂಗೀಯ ಸಂಘರ್ಷ ಮತ್ತಷ್ಟು ಮುಂದುವರಿದಿದ್ದು, ಈ ನಡುವೆ ಸ್ಥಳೀಯರ ತೀವ್ರ ಪ್ರತಿರೋಧದಿಂದಾಗಿ, ಸೇನೆಯು 12 ಉಗ್ರರನ್ನು ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ಇಂಫಾಲ್ ಪೂರ್ವದಲ್ಲಿರುವ ಇಥಾಮ್ ಗ್ರಾಮದಲ್ಲಿ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಸೇನೆ ಆ ಪ್ರದೇಶವನ್ನು ಸುತ್ತುವರಿದು 12ಉಗ್ರರನ್ನು ವಶಕ್ಕೆ ಪಡೆದಿದ್ದರು.

ಆದರೆ, ಸೇನೆಯ ಕಾರ್ಯಾಚರಣೆಗೆ ಅಡ್ಡಬಂದ ಮಹಿಳೆಯರು ಸುಮಾರು 1,200 ಜನ ಸೇನಾ ವಾಹನಗಳನ್ನು ಸುತ್ತುವರಿದು ಅವರನ್ನು ಮುನ್ನಡೆಯದಂತೆ ತಡೆದರು. ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ಸೇನೆ ಎಷ್ಟೇ ಎಚ್ಚರಿಕೆ ನೀಡಿದರೂ ಎರಡು ಗುಂಪುಗಳ ನಡುವಿನ ಜಟಾಪಟಿ ಕೊನೆಗೊಳ್ಳದ ಕಾರಣ ಸೇನೆ 12 ಉಗ್ರರನ್ನು ಬಿಡಬೇಕಾಯಿತು. ಯಾವುದೇ ಪ್ರಾಣಹಾನಿಯಾಗಲೀ, ರಕ್ತಪಾತವಾಗಲೀ ಆಗದಂತೆ ತಡೆಯಲು ಸೇನೆ ಈ ರೀತಿಯ ಪ್ರಬುದ್ಧ ನಿರ್ಧಾರ ಕೈಗೊಂಡಿತು.

ಸೇನೆಯು ಗ್ರಾಮದಲ್ಲಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ದೊಡ್ಡ ಸಂಗ್ರಹವನ್ನು ಸ್ವಾಧೀನಪಡಿಸಿಕೊಂಡಿದೆ. ಮೈತೇಯಿ ಪಂಗಡಕ್ಕೆ ಸೇರಿದ ಉಗ್ರಗಾಮಿ ಸಂಘಟನೆ ಕೈಕಾಲೆ ಸದಸ್ಯರು ಇದೀಗ ಪರಾರಿಯಾಗಿದ್ದಾರೆ. ಗ್ರಾಮದ ಪ್ರಮುಖ ವ್ಯಕ್ತಿ ಮೊಯರಂಗತೇಮ್ ತಾಂಬಾ ಅಲಿಯಾಸ್ ಉತ್ತಮ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದಾನೆ. ಈತ ಡೋಗ್ರಾ ಹೊಂಚುದಾಳಿಯ ಮಾಸ್ಟರ್ ಮೈಂಡ್ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಮೈತೇಯಿ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವೆ ಮೇ 3ರಂದು ಆರಂಭವಾದ ಹಿಂಸಾಚಾರ ಇನ್ನೂ ಕಡಿಮೆಯಾಗಿಲ್ಲ.  ಈ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಈ ಹಿಂಸಾಚಾರ ಶಮನ ಮಾಡುವ ಕುರಿತು ಶನಿವಾರ ಕೇಂದ್ರ ಗೃಹ ಸಚಿವರು ದೆಹಲಿಯಲ್ಲಿ ಸರ್ವಪಕ್ಷ ಸಭೆ ನಡೆಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!