ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ವಾಯುಪಡೆ ನೆಲೆಗಳ ಕಣ್ಗಾವಲು ಮತ್ತು ಭದ್ರತೆಗಾಗಿ ಭಾರತೀಯ ವಾಯುಪಡೆಯು 100 ಮಾನವರಹಿತ ವೈಮಾನಿಕ ವ್ಯವಸ್ಥೆಗಳನ್ನು (ಯುಎಎಸ್ ಅಥವಾ ಯುಎವಿ) ಖರೀದಿಸಲು ನಿರ್ಧರಿಸಿದೆ.
ಕಳೆದ ವರ್ಷ ಜೂನ್‌ನಲ್ಲಿ ಜಮ್ಮು ವಾಯುನೆಲೆಯಲ್ಲಿ ಡ್ರೋನ್ ದಾಳಿಯಗಿಯಾಗಿತ್ತು. ಈ ಹಿನ್ನೆಲೆ ಇಂತಹ ದಾಳಿಗಳನ್ನು ಎದುರಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ 100 ಯುಎವಿಗಳನ್ನು ಖರೀದಿಸಿಲು ನಿರ್ಧರಿಸಿದೆ. ಅಲ್ಲದೇ, ಈ ಡ್ರೋನ್ ವ್ಯವಸ್ಥೆಗಳನ್ನು ಭಾರತೀಯ ಮಾರಾಟಗಾರರು ಅಥವಾ ಭಾರತೀಯ ಮೂಲದ ಉಪಕರಣ ತಯಾರಕರಿಂದ ಖರೀದಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಹೈದರಾಬಾದ್ ಮೂಲದ ಝೆನ್ ಟೆಕ್ನಾಲಜೀಸ್ ಸಂಸ್ಥೆಗೆ ಡ್ರೋನ್ ವಿರೋಧಿ ವ್ಯವಸ್ಥೆಗಳ ಪೂರೈಕೆಗಾಗಿ 155 ಕೋಟಿ ರೂ. ವೆಚ್ಚ ಮಾಡಿತ್ತು. ಪ್ರಸ್ತುತ ಯುಎಎಫ್‌ಗಳ ಖರೀದಿಯು ಭಾರತೀಯ ವಾಯುಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ. ಖರೀದಿಸಲಾಗುವ ಈ ಉಪಕರಣಗಳನ್ನು ದೇಶದ ವಿವಿಧ ವಾಯುಪಡೆ ನೆಲೆಗಳಲ್ಲಿ ಕಣ್ಗಾವಲು, ವಿಚಕ್ಷಣ ಮತ್ತು ಪತ್ತೆಗಾಗಿ ಬಳಸಲಾಗುತ್ತದೆ.