ಹೊಸದಿಗಂತ ವರದಿ ಹೊನ್ನಾವರ:
ಹೊನ್ನಾವರ ತಾಲೂಕಿನ ಕಾಸರಗೋಡಿನಲ್ಲಿ ಉದ್ದೇಶಿತ ವಾಣಿಜ್ಯ ಬಂದರು ಕಾಮಗಾರಿಗಾಗಿ ಸರ್ವೇ ಕಾರ್ಯ ನಿಷೇಧಾಜ್ಞೆ ನಡುವೆ ಮಂಗಳವಾರ ಆರಂಭವಾಗಿದ್ದು ಸ್ಥಳೀಯರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.
ಸ್ಥಳದಲ್ಲಿ ಜಮಾಯಿಸಿದ ಮೀನುಗಾರರಿಂದ ಸರ್ವೇಗೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದು ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ. ಸೆಕ್ಷನ್ 144ನಡುವೆಯು ಪ್ರತಿಭಟನೆಗೆ ಮುಂದಾದ ಸ್ಥಳೀಯರನ್ನು ಪೊಲೀಸರು ತಡೆದಿದ್ದಾರೆ.
ಈ ವೇಳೆ ಓರ್ವ ಮೀನುಗಾರ ಯುವಕ,ನಾಲ್ವರು ಮೀನುಗಾರ ಮಹಿಳೆಯರು ಅಸ್ವಸ್ಥಗೊಂಡಿದ್ದು, ಅಂಬ್ಯುಲೆನ್ಸ್ ಮೂಲಕ ತಾಲೂಕಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬಿಗಿಪೊಲೀಸ್ ಬಂದೋಬಸ್ತ್ ನಲ್ಲಿ ಅಧಿಕಾರಿಗಳು ಸರ್ವೆ ನಡೆಸುತ್ತಿದ್ದು, ಭಟ್ಕಳ ಉಪ ವಿಭಾಗಾಧಿಕಾರಿ ಕಾವ್ಯಾ ರಾಣಿ, ಡಿವೈಎಸ್ ಪಿ ಮಹೇಶ್ ಕೆ,ತಹಶೀಲ್ದಾರ ಪ್ರವೀಣ ಕರಾಂಡೆ,ಪಿಐ ಸಿದ್ರಾಮೇಶ್ವರ ಸ್ಥಳದಲ್ಲೇ ಬಿಡುಬಿಟ್ಟಿದ್ದಾರೆ.
ತಮ್ಮ ಮನೆ,ಭೂಮಿ ಕಳೆದುಕೊಳ್ಳುವ ಭೀತಿಯಿಂದ ಸಮುದ್ರದಡದಲ್ಲಿ ಗುಂಪು ಗುಂಪಾಗಿ ಮೀನುಗಾರರು ಸೇರತೊಡಗಿದ್ದು, ಮೀನುಗಾರರನ್ನು ಪೊಲೀಸರು ಚದುರಿಸುತ್ತಿದ್ದಾರೆ.