ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಶನಿವಾರ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆಸುತ್ತಿದ್ದ ರಾಜಕೀಯ ರ್‍ಯಾಲಿಯಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಿಂದ ಅವರ ಬಲಕಿವಿಗೆ ಗಾಯವಾಗಿದೆ .
ಹತ್ಯೆ ಯತ್ನದ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿರುವ ಟ್ರಂಪ್, ‘ದೇವರ ದಯೆಯಿಂದ ಬದುಕುಳಿದಿದ್ದು, ಅಮೆರಿಕನ್ನರು ಒಂದಾಗುವಂತೆ ಕರೆ ನೀಡಿದ್ದಾರೆ. ಊಹಿಸಲಾಗದ್ದನ್ನು ನಡೆಯದಂತೆ ತಡೆಯುವವನು ದೇವರು ಮಾತ್ರ. ಕೆಟ್ಟದು ಗೆಲ್ಲದಂತೆ ಅಮೆರಿಕನ್ನರು ಒಗ್ಗಟ್ಟಿನಿಂದ ನಿಲ್ಲುವಂತೆ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ.
ಈ ಕ್ಷಣದಲ್ಲಿ ನಾವು ಒಗ್ಗಟ್ಟಾಗಿ ನಿಲ್ಲುವುದು ಮತ್ತು ಅಮೆರಿಕನ್ನರಾಗಿ ನಮ್ಮ ನಿಜವಾದ ಪಾತ್ರವನ್ನು ತೋರಿಸುವುದು, ದೃಢವಾಗಿ ಉಳಿಯುವುದು ಮತ್ತು ಕೆಟ್ಟದು ಗೆಲ್ಲಲು ಬಿಡದಿರುವುದು ಪ್ರಮುಖವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ವಿಸ್ಕಾನ್ಸಿನ್‌ನ ಮಿಲ್ವಾಕೀಯಲ್ಲಿ ಸೋಮವಾರ ನಡೆಯಲಿರುವ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುವುದಾಗಿ ಅವರು ಖಚಿತಪಡಿಸಿದ್ದಾರೆ.