ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಅದ್ದೂರಿಯಾಗಿ ಶುರುವಾಗಿದೆ . ಅದ್ರೆ ಪ್ರತಿ ಬಾರಿಯೂ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಐಪಿಎಲ್ ಸೀಸನ್ ಎಂಬ ಮಾತು ಕೇಳಿ ಬರುತ್ತಿರುತ್ತದೆ. ಅದರೆ ಅವರು ಇದನ್ನು ಲೆಕ್ಕಿಸದೆ ತನ್ನ ಆಟದಲ್ಲಿ ಇನ್ನಷ್ಟು ಚುರುಕುತನ ತೋರಿಸುತ್ತಿರುತ್ತಾರೆ.
https://x.com/IPL/status/1903829068996632608
ಎಂಎಸ್ ಧೋನಿ ಕ್ರಿಕೆಟ್ ಆಡೋದು ಐಪಿಎಲ್‌ನಿಂದ ಐಪಿಎಲ್ ಸಮಯದಲ್ಲಿ ಮಾತ್ರ. ಕೊನೆಯ ಬಾರಿ ಕ್ರಿಕೆಟ್ ಆಡಿ ಸುಮಾರು 10 ತಿಂಗಳ ನಂತರ, ಮತ್ತೆ ಮೈದಾನಕ್ಕಿಳಿದ್ದಿದ್ದಾರೆ. ವಿಶ್ವದ ಅತ್ಯಂತ ಚಾಣಾಕ್ಷ ಹಾಗೂ ತೀಕ್ಷ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರಾಗಿರುವ ಧೋನಿ, ಈ ಬಾರಿ ಮತ್ತೆ ಸ್ಪಂಪ್ಸ್ ಹಿಂದೆ ತಮ್ಮ ಚಾಣಾಕ್ಷ ನಡೆ ತೋರುತ್ತಿದ್ದಾರೆ. 43ನೇ ವಯಸ್ಸಿನಲ್ಲಿಯೂ, ವಯಸ್ಸೇ ನಾಚುವಂತೆ ಫಿಟ್ ಆಗಿ ಆಡುತ್ತಿದ್ದಾರೆ.
ಇದೀಗ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿರುವ ಧೋನಿ, ಎದುರಾಳಿ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪೆವಿಲಿಯನ್ ಸೇರುವಂತೆ ಮಾಡಿದ್ದಾರೆ. ಈ ಮೂಲಕ ತನ್ನ ಆಟ ಇನ್ನೂ ಮುಗಿದಿಲ್ಲ ಎಂಬ ಸಂದೇಶ ನೀಡಿದ್ದಾರೆ.