ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಫೈನಲ್ ನಂತರ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಫೀಲ್ಡ್‌ನಲ್ಲಿ ಕ್ಯಾಮೆರಾ ಮುಂದೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಕೈ ಕುಲುಕದಿರುವುದರಿಂದ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸೂರ್ಯಕುಮಾರ್ ಖಾಸಗಿ ಸಂದರ್ಭಗಳಲ್ಲಿ ಕೈ ಕುಲುಕಿದರೂ, ಕ್ಯಾಮೆರಾ ಮುಂದೆ ಅವರು ನೀಡಿದ ಸೂಚನೆಗಳನ್ನಷ್ಟೇ ಪಾಲಿಸುತ್ತಿದ್ದರು ಎಂದು ಸಲ್ಮಾನ್ ಅಘಾ ಹೇಳಿದ್ದಾರೆ.
ಏಷ್ಯಾಕಪ್ ಫೈನಲ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಸಲ್ಮಾನ್ ಅಘಾ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿ, “ಟೀಮ್ ಇಂಡಿಯಾ ಆಟಗಾರರು ಇಡೀ ಟೂರ್ನಿಯಲ್ಲಿ ಶಿಸ್ತಿನಿಂದ ವರ್ತಿಸಿದ್ದರು, ಆದರೆ ನಮಗೆ ನೀಡಿರುವ ಗೌರವವನ್ನು ಮೀರಿ ಅವರು ಕೈ ಕುಲುಕದೇ ನಮ್ಮನ್ನ ಅಗೌರವಿಸಿದ್ದಾರೆ. ಕ್ರಿಕೆಟ್‌ನ ಸಮಾನತೆಯನ್ನು ಮೀರಿ ವರ್ತಿಸುವುದು ತಕ್ಕದ್ದಲ್ಲ, ವಿಶೇಷವಾಗಿ ಮಕ್ಕಳಿಗೆ ಕೆಟ್ಟ ಸಂದೇಶ ನೀಡುತ್ತದೆ” ಎಂದು ಹೇಳಿದರು.
ಆದರೂ ಸಲ್ಮಾನ್ ಅಘಾ ಭಾರತೀಯ ‘ಆಪರೇಷನ್ ಸಿಂದೂರ’ದ ಪರಾಕ್ರಮವನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ, ಭಾರತೀಯ ಸೇನೆಯ ಕಾರ್ಯಾಚರಣೆಯಲ್ಲಿ ಮೃತರಾದ ಪಾಕಿಸ್ತಾನಿ ನಾಗರಿಕರ ಕುಟುಂಬಕ್ಕೆ ತಮ್ಮ ತಂಡ ಪಂದ್ಯ ಶುಲ್ಕವನ್ನು ದಾನ ಮಾಡುವ ನಿರ್ಧಾರ ಕೂಡ ಮಾಡಿಕೊಂಡಿದೆ.